ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ಕಾಟುಕುಕ್ಕೆಯಲ್ಲಿ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ತೋಟ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ. ತೋಟದ ಕಾರ್ಮಿಕ ಕುಞÂರಾಮನ್ ಗಾಯಾಳು. ಕಾಟುಕುಕ್ಕೆ ದೇಯಿಮೂಲೆ ನಿವಾಸಿ ಥಾಮಸ್‍ಕಾಪ್ಪನ್ ಎಂಬವರ ತೋಟದಲ್ಲಿ ಕೆಲಸ ನಿರ್ವಹಣೆಗಾಗಿ ಬೆಳಗ್ಗೆ 6ಕ್ಕೆ ತೋಟಕ್ಕೆ ತೆರಳಿದ್ದ ಸಂದರ್ಭ ಕಾಡುಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಇವರ ಕತ್ತು ಹಾಗೂ ಕಿವಿ ಭಾಗಕ್ಕೆ ಗಂಭೀರ ಗಾಯಗಳುಂಟಾಗಿದ್ದು, ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.






