ಕಾಸರಗೋಡು: ನಗರಸಭೆ ವತಿಯಿಂದ ನೆಲ್ಲಿಕುಂಜೆ ಬೀಚ್ ರಸ್ತೆಯಲ್ಲಿ ನಿರ್ಮಿಸಲಾದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವನ್ನು ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಅಧ್ಯಕ್ಷತೆ ವಹಿಸಿದ್ದರು.
ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಹಿರ್ ಆಸಿಫ್, ಆರ್.ರೀತಾ, ಸಿಯಾನಾ ಹನೀಫ್, ಕೆ.ರಜನಿ, ನಗರಸಭಾ ಸದಸ್ಯರಾದ ಮುಸ್ತಾಕ್ ಚೇರಂಗೈ, ಅಬ್ದುಲ್ ರಹಿಮಾನ್ ಚಕ್ಕರ, ಅಜಿತ್ ಕುಮಾರ್, ಎಂ.ಉಮಾ, ಹನೀಫ ನೆಲ್ಲಿಕುಂಜೆ, ಪುರಸಭೆ ಇಂಜಿನಿಯರ್ ಆರ್.ಪ್ರಸೀಜಾ, ನಗರ ಆರೋಗ್ಯ ಸಂಯೋಜಕ ಅಲೆಕ್ಸ್ ಜೋಸ್, ಡಾ. ಫಾತಿಮಾ ಫಿದಾ (ಯುಪಿಎಚ್‍ಸಿ ಪ್ರಭಾರ ವೈದ್ಯಾಧಿಕಾರಿ), ಡಾ.ಕೆ.ಎಸ್.ಆಸಿಯತ್ ಸೈಫಾ ಮುರ್ಷಿದಾ, ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಉಪಸ್ಥೀತರಿದ್ದರು. ನಗರಸಭಾ ಕಾರ್ಯದರ್ಶಿ ಡಿ.ವಿ. ಅಬ್ದುಲ್ ಜಲೀಲ್ ವಂದಿಸಿದರು.

