ಕಾಸರಗೋಡು: ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಭಾರತೀಯ ವಕೀಲರ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ವಕೀಲ ಕೆ ಕರುಣಾಕರನ್ ನಂಬಿಯಾರ್ ಸಮಾರಂಭ ಉದ್ಘಾಟಿಸಿದರು.
ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ, ವಕೀಲೆ ಕೆ.ಎಂ.ಬೀನಾ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ವಕೀಲರಾದ ಚೈತ್ರಾ, ಚೈತನ್ಯ ಮೊದಲದವರು ಉಪಸ್ಥಿತರಿದ್ದರು. ವಕೀಲರ ಪರಿಷತ್ ಕಾಸರಗೋಡು ಘಟಕದ ಕಾರ್ಯದರ್ಶಿ ಜಾಹ್ನವಿ ಸ್ವಾಗತಿಸಿದರು. ಸಂಗೀತಾ ವಂದಿಸಿದರು.

