ಕಾಸರಗೋಡು: ಕೇರಳಾದ್ಯಂತ ಎಸ್ಸೆಸೆಲ್ಸಿ-ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ಸೋಮವಾರ ಅರಂಭಗೊಂಡಿತು. ಬೆಳಗ್ಗೆ ಎಸ್ಸೆಸೆಲ್ಸಿ ಹಾಗೂ ಮಧ್ಯಹ್ನ ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ನಡೆಯಿತು. 26ರ ವರೆಗೆ ಪರಿಕ್ಷೆ ನಡೆಯಲಿದೆ.
ರಾಜ್ಯದ 2964ಪರೀಕ್ಷಾ ಕೇಂದ್ರಗಳಲ್ಲಿ 425861ಮಂದಿ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆಬರೆಯಲಿದ್ದಾರೆ. ಕೊಲ್ಲಿರಾಷ್ಟ್ರದ ಏಳು ಪರೀಕ್ಷಾ ಕೇಂದ್ರಗಳಲ್ಲಿ 682ಮಂದಿ, ಲಕ್ಷದ್ವೀಪದ ಒಂಬತ್ತು ಕೇಂದ್ರಗಳಲ್ಲಿ 447ಮಂದಿ ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ಒಟ್ಟು 217966ಮಂದಿ ವಿದ್ಯಾರ್ಥಿಗಳು ಹಾಗೂ 209325ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 20581ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಹೈಯರ್ ಸೆಕೆಂಡರಿ ಪ್ರಥಮ ವರ್ಷದ ಪರೀಕ್ಷೆ 6ರಿಂದ 29ರ ವರೆಗೆ ಜರುಗಲಿದೆ. ಎರಡನೇ ವರ್ಷದ ಪರೀಕ್ಷೆ ಮಾ. 3ರಿಂದ 26ರ ವರೆಗೆ ನಡೆಯಲಿದೆ. ಒಟ್ಟು 1190409ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
:ಕೇರಳಾದ್ಯಂತ ಎಸ್ಸೆಸೆಲ್ಸಿ-ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ಸೋಮವಾರ ಆರಂಭಗೊಂಡಿದ್ದು, ಪರೀಕ್ಷೆ ಕಳೆದು ಹೊರ ಬಂದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಅವಲೋಕನ ನಡೆಸಿದರು.





