ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನ ಭೋಜನಕ್ಕಾಗಿ ಶಾಲೆಗೆ ನೂತನವಾಗಿ ನೇಮಕಾತಿಗೊಂಡ ಶಿಕ್ಷಕಿಯರಾದ ಐಶ್ವರ್ಯ ಮತ್ತು ಅಯಿಷತ್ ಸೈನಾಜ್ .ಅವರು ಸ್ಟೀಲ್ ಊಟದ ತಟ್ಟೆಗಳನ್ನು ಕೊಡುಗೆಯಾಗಿ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಅವರಿಗೆ ನೀಡಿದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹಮಾನ್, ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷೆ ಬೀನಾ ನೌಫಲ್, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್, ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್, ಮಜೀದ್,ಎಸ್.ಡಿ.ಸಿ. ಉಪಾಧ್ಯಕ್ಷ ಇಸ್ಮಾಯಿಲ್, ಎಸ್.ಎಂ.ಸಿ. ಸದಸ್ಯ ಫಾರೂಕ್ ಉಪಸ್ಥಿತರಿದ್ದರು.




.jpg)

