HEALTH TIPS

ಇಂದು ಕಾರ್ಮಾರು ಶ್ರೀ ಮಹಾವಿಷ್ಣು ದೇವರ ಪ್ರತಿಷ್ಠೆ

ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು, 5ನೇ ದಿನ ಮಾ.5ರಂದು ಬೆಳಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರತತ್ವ ಹೋಮ, ತತ್ವಕಲಶ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿμÉೀಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರ ಪೂಜೆ, ಮಹಾಪೂಜೆ ನಡೆಯಿತು.ಸಂಜೆ ಬಿಂಬಶುದ್ಧಿ, ಕಲಶಾಭಿμÉೀಕ, ಪೀಠಾಧಿವಾಸ, ಧ್ಯಾನಾಧಿವಾಸ, ಅಧಿವಾಸ ಹೋಮ, ಅಧಿವಾಸ ಬಲಿ, ತ್ರಿಕಾಲಪೂಜೆ, ಶಿರಸ್ತತ್ವ ಹೋಮ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮಹಾಪೂಜೆ, ನಡೆಯಿತು. 


ಇಂದು ಶ್ರೀದೇವರ ಪ್ರತಿಪ್ರತಿಷ್ಠೆ:

ಮಾ.6ರಂದು ಬೆಳಗ್ಗೆ 4 ಗಂಟೆಯಿಂದ 108 ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿμÁ್ಠಪಾಣಿ, 7.37ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಹಾಗೂ ಪರಿವಾರ ದೇವತಾ ಪ್ರತಿμÉ್ಠ, ಜೀವಕಲಶಾಭಿμÉೀಕ, ನಿದ್ರಾಕಲಶಾಭಿμÉೀಕ, ಪ್ರತಿμÁ್ಠಬಲಿ ನಡೆಯಲಿದೆ. ಸಂಜೆ 7ರಿಂದ ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ,ಅಂಕುರ ಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಲಿದೆ.


ಸಾಂಸ್ಕøತಿಕ ಕಾರ್ಯಕ್ರಮಗಳು:

ಮಾ.5ರಂದು 10 ಗಂಟೆಗೆ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಯಕ್ಷಗಾನ ತಾಳಮದ್ದಳೆ, 1.30ರಿಂದ ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತ ಅಶ್ವಿನಿರಾಜ್ ಪಟ್ಟಾಜೆ ಶ್ರೀದುರ್ಗಾ ಸ್ಕೂಲ್ ಆಫ್ ಮ್ಯೂಸಿಕ್ ಬದಿಯಡ್ಕ ಇವರಿಂದ, 3.30ರಿಂದ ಕುಮಾರಿ ಪ್ರಣಮ್ಯ ಕೆ.ಎಸ್.ಇವರಿಂದ ಹರಿಕಥೆ-ಗಣಪತಿ ಮಹಾತ್ಮೆ, 5 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ, ಜ್ಯೋತಿಷಿ ಕೆ.ವೆಂಕಟೇಶ್ವರ ಭಟ್ ಮೈಸೂರು ಅವರಿಂದ ಉದ್ಘಾಟನೆ, ಡಾ. ರಾಧಾಕೃಷ್ಣ ಬೇಂಗ್ರೋಡಿ ಅವರಿಂದ ಧಾರ್ಮಿಕ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ವಿದುಷಿ ಪನ್ನಗ ಜಿ.ರಾವ್ ಉಡುಪಿ ಇವರಿಂದ ಭರತನಾಟ್ಯ, 9.30ರಿಂದ ಶ್ರೀ ಮಧ್ವಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ಶ್ರೀ ಮಹಾವಿಷ್ಣು ಮಹಿಳಾವೃಂದ ಕಾರ್ಮಾರು ಪ್ರಾಯೋಜಕತ್ವದಲ್ಲಿ ಭಕ್ತಿಸಿಂಚನ ಜರಗಿತು. ಇಂದು(ಮಾ.6) ಬೆಳಗ್ಗೆ 10 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹಾಗೂ ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಅವರಿಂದ ಆಶೀರ್ವಚನ, ವಾಸ್ತು ಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 1.30ರಿಂದ ಶಾಂಭವಿ ಪ್ರಾಣೇಶ್ ಇವರಿಂದ ಭಕ್ತಧ್ರುವರಾಯ ಶ್ರೀಹರಿಕಥೆ, 4 ಗಂಟೆಯಿಂದ ಧೀಶಕ್ತಿ ಮಹಿಳಾ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, 7.30ರಿಂದ ವಿದುಷಿ ಲತಾ ಶಶಿಧರನ್ ಕಾಸರಗೋಡ ಇವರ ಶಿಷ್ಯವೃಂದದವರಿಂದ ಭರತನಾಟ್ಯ, 9ರಿಂದ ಯಕ್ಷರಂಜಿನಿ ಕಲಾಕೇಂದ್ರ ಬದಿಯಡ್ಕ ಹಾಗೂ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಚಿತ್ರ:  ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾಬಲಿ, ಅನುಜ್ಞಾ ಪ್ರಾರ್ಥನೆ, ನಡೆಯಿತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries