ಇಡುಕ್ಕಿ: ವಂಡಿಪೆರಿಯಾರ್ ಗ್ರಾಂಪಿಗೆ ಬಂದಿಳಿದ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಹುಲಿ ಹಿಡಿಯಲು ಬಂದ ಕಾರ್ಯಪಡೆ ಮತ್ತುಬರಿಸುವ ಮಾದಕ ವಸ್ತು ಪ್ರಯೋಗಿಸುವ ವೇಳೆ ನಡೆದ ಹಠಾತ್ ಘಟನೆಯಲ್ಲಿ ಹುಲಿ ಸಾವನ್ನಪ್ಪಿದೆ.
ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಾರಿದ ಹುಲಿಯನ್ನು ಮಿಷನ್ ತಂಡವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿತು. ಇದರೊಂದಿಗೆ ಹುಲಿ ಸತ್ತುಹೋಯಿತು.
ಹುಲಿಯನ್ನು ಮತ್ತುಬರಿಸಿ ಬಂಧಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ನಂತರ ಮಿಷನ್ ತಂಡವು ಗ್ರೆನೇಡ್ ಹಾರಿಸಿತು. ಆದರೆ ಹುಲಿಯು ಮಿಷನ್ ತಂಡ ಪ್ರಯೋಗಿಸಿದ ಮತ್ತಿನ ಔಷಧಿ ತಾಗಿ ನಿದ್ರಿಸಲು ಇನ್ನೂ ಸಮಯ ಬೇಕಾಗಿರುವಾಗಲೇ ದಾಳಿ ಮಾಡಿತು. ಈ ವೇಳೆ ಜೀವರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಹುಲಿ ದಾಳಿಯಲ್ಲಿ ಮಿಷನ್ ತಂಡದ ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹುಲಿ ಸತ್ತ ನಂತರ, ತೆಕ್ಕಾಡಿಗೆ ಕೊಂಡೊಯ್ಯಲಾಯಿತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಮೃತಪಟ್ಟಿರುವ ಸುದ್ದಿಯನ್ನು ಬಿಡುಗಡೆ ಮಾಡಿದರು. ಪ್ರಸ್ತುತ ತೆಕ್ಕಡಿಯಲ್ಲಿರುವ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಡಿಎಫ್‍ಒ ತಿಳಿಸಿದ್ದಾರೆ.





