ಕುಂಬಳೆ: ಕಣ್ಣೂರಿನ ಶ್ರೀ ನಾರಾಯಣ ಕಾಲೇಜಲ್ಲಿ ಇತ್ತೀಚೆಗೆ ನಡೆದ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಯಕ್ಷಗಾನ ಸ್ಫರ್ಧೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ನೀರ್ಚಾಲು, ಚೆಂಡೆಯಲ್ಲಿ ವರ್ಷಿತ್ ಕೆಜ್ಜೆಕ್ಕಾರು, ಮದ್ದಳೆಯಲ್ಲಿ ಮಾ. ಸ್ಕಂದ ಕಾಟುಕುಕ್ಕೆ ಸಹಕರಿಸಿದರು.
ವೀರ ಬಬ್ರುವಾಹನ ಎಂಬ ಪ್ರಸಂಗವನ್ನು ಪ್ರದರ್ಶಿಸಿದ್ದು ನಿರ್ದೇಶನ ಮತ್ತು ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಜುನನಾಗಿ ಸನತ್ ರಾಜ್ ಇಡಿಯಡ್ಕ, ವೃಷಕೇತುವಾಗಿ ಲಿಖಿತ್ ಬಿರ್ಮೂಲೆ, ಬಭ್ರುವಾಹನನಾಗಿ ಹರ್ಷ ಸಜಂಗದ್ದೆ, ಮಂತ್ರಿಯಾಗಿ ಕಾರ್ತಿಕ್ ಕಾಟುಕುಕ್ಕೆ, ಚಿತ್ರಾಂಗದೆಯಾಗಿ ಆದಿಶ್ರೀ ಪೈವಳಿಕೆ, ಅನುಸಾಲ್ವನಾಗಿ ಕಿರಣ್ ಕಾಟುಕುಕ್ಕೆ, ಕೃಷ್ಣನಾಗಿ ಅಭಿಲಾಷ್ ಬೆಳ್ಳೂರು, ತೆರೆಯಲ್ಲಿ ತನುಷ್ ಕಾಟುಕುಕ್ಕೆ,ವಿಖ್ಯಾತ್ ಚಿಪ್ಪಾರು ಭಾಗವಹಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ಆಂಗ್ಲ ಪ್ರಾಧ್ಯಾಪಕಿ ಮೀನಾ ಶಂಕರ್, ಅನಿರುದ್ಧ, ಶಾಝೀಯ, ಚೇರ್ಮೆನ್ ಗಜ್ವಾನ್ ಸಹಕರಿಸಿದರು.




.jpg)

