ಮುಳ್ಳೇರಿಯ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ದೇವಾಲಯದ ಸಭಾಭವನದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ಇಂದ್ರಜಿತು ಯಕ್ಷಗಾನ ತಾಳಮದ್ದಳೆ ಜರಗಿತು.
ಯಕ್ಷಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯೊಂದಿಗೆ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯ ಕೃತಿಯನ್ನೊಳಗೊಂಡ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್, ಹಾಗೂ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವಹಿಸಿದ್ದರು.
ಚೆಂಡೆ ಮದ್ದಳೆ ವಾದನದಲ್ಲಿ ವಿಷ್ಣು ಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರಮಂಗಲ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಮತ್ತು ಚಕ್ರತಾಳದಲ್ಲಿ ಶ್ರೀದೇವ್ ಆಚಾರ್ಯ ಸಹಕರಿಸಿದರು. ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಶೀಲಾ ಹೇಮನಾಥ ಕೇದೆಗಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮಾ ಮನೋಹರ ಬಂದ್ಯಡ್ಕ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯಕುಮಾರ್ ದೇಲಂಪಾಡಿ, ಸುಜಾತ ಮೋಹನದಾಸ ರೈ ದೇಲಂಪಾಡಿ, ಶಾಂತಾಕುಮಾರಿ ದೇಲಂಪಾಡಿ, ಕುಸುಮಾ ಜಯಪ್ರಕಾಶ್ ಕುತ್ತಿಮುಂಡ, ಈ ಪ್ರತಿಭಾನ್ವಿತ ಮಹಿಳಾ ಮಾತೆಯರು ಪ್ರಸ್ತುತ ಪಡಿಸಿದ ಅರ್ಥಗಾರಿಕೆ ಜನಮೆಚ್ಚುಗೆ ಗಳಿಸಿತು. ದೇವಾಲಯದ ಆಡಳಿತ ಮಂಡಳಿಯವರು ಸ್ವಾಗತಿಸಿ, ರಾಮನಾಯ್ಕ ದೇಲಂಪಾಡಿ ವಂದಿಸಿದರು.




.jpg)

