ಕಾಸರಗೋಡು: ಸಮಾಜವನ್ನು ಅತಿಯಾಗಿ ಕಾಡುತ್ತಿರುವ ಮಾದಕ ವಸ್ತುಪಿಡುಗಿನ ವಿರುದ್ಧ ರಾಷ್ಟ್ರೀಯ ಶಿಕ್ಷಕರ ಪರಿಷತ್(ಎನ್‍ಟಿಯು)ನೇತೃತ್ವದಲ್ಲಿ ಮಾದಕ ವ್ಯಸನದ ವಿರುದ್ಧ ಮೇಣದ ಬತ್ತಿ ಉರಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಸರಗೋಡು ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಡಿದ ಅವರು, ಮಾದಕ ದ್ರವ್ಯ ಮಾಫಿಯಾಗಳ ವಿರುದ್ಧ ಸಮಾಜ ಧ್ವನಿಯೆತ್ತಬೇಕಾಗಿದೆ. ಮಾದಕ ದ್ರವ್ಯಗಳ ದಸರಾಗುವುದನ್ನು ತಡೆಯುವ ಮೂಲಕ ಭಾಚೀ ಜನಾಂಗವನ್ನು ರಕ್ಷಿಸುವ ಜವಾಬ್ದರಿ ನಮ್ಮೆಲ್ಲರ ಮೇಲಿದೆ. ಡ್ರಗ್ಸ್ ಮಾಫಿಯಾ ವಿರುದ್ಧ ಸಮಾಜ ಸ್ಪಂದಿಸಲು ತಡ ಮಾಡಿದರೆ ದೇಶ ಭಾರೀ ಆಪತ್ತಿಗೆ ಸಿಲುಕಬೇಕಾದೀತು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ.ಪ್ರಭಾಕರನ್ ನಾಯರ್, ಒ.ಸತೀಶ್ ಕುಮಾರ್ ಶೆಟ್ಟಿ, ಅರವಿಂದಾಕ್ಷ ಭಂಡಾರಿ ಮೊದಲದವರು ಉಪಸ್ಥಿತರಿದ್ದರು. ಎ.ಸುಚಿತಾ ಸ್ವಾಗತಿಸಿದರು. ಕೆ.ಅಜಿತ್ ವಂದಿಸಿದರು.

