ಗುರುವಾಯೂರು: ಕಳೆದ ಮೂರು ಬಾರಿ ಡ್ರಾ ಕಣದಲ್ಲಿದ್ದರೂ ಆರಿಸಬಾರದೆ ಕೊನೆಗೆ, ನಾಲ್ಕನೇ ಪ್ರಯತ್ನದಲ್ಲಿ, ಅಚ್ಯುತನ್ ನಂಬೂದಿರಿಗೆ ಗುರುವಾಯೂರಪ್ಪನನ್ನು ಪೂಜಿಸುವ ಅವಕಾಶ ಲಭಿಸಿದೆ.
ಮಲಪ್ಪುರಂನ ಎಡಪ್ಪಲ್‍ನ ಕವಪ್ರ ಮಾರತ್ ಮನೆಯ ಅಚ್ಯುತನ್ ನಂಬೂದಿರಿ (52) ಗುರುವಾಯೂರ್ ದೇವಸ್ಥಾನದ ನೂತನ ಮೇಲ್ಶಾಂತಿಯಾಗಿ ಆಯ್ಕೆಯಾಗಿದ್ದಾರೆ. ಮೂವತ್ತೆಂಟು ಹೆಸರುಗಳಿಂದ ಚೀಟಿ ಎತ್ತುವ ಮೂಲಕ ಅಚ್ಯುತನ್ ನಂಬೂದಿರಿ ಅವರನ್ನು ಪ್ರಧಾನ ಅರ್ಚಕರನ್ನಾಗಿ ಆಯ್ಕೆ ಮಾಡಲಾಯಿತು. ಇವರ ಅವಧಿ ಆರು ತಿಂಗಳು. ಮಾರ್ಚ್ 31 ರಂದು, ಅವರು ತಮ್ಮ ಲಾಂಛನವಾದ ಕೀಲಿ ಉಂಗುರವನ್ನು ಸ್ವೀಕರಿಸುತ್ತಾರೆ ಮತ್ತು ನಿರ್ಗಮಿತ ಶಾಂತಿಯ ಬದಲಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ.
ಮರಾತ್ ಮನೆಯ ನೀಲಕಂಠನ್ ನಂಬೂದಿರಿ ಮತ್ತು ಪಾರ್ವತಿ ಅಂತರ್ಜನಂ ಅವರ ಪುತ್ರ ಅಚ್ಯುತನ್ ನಂಬೂದಿರಿ, ವಲಂಚೇರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಸ್ಕøತ ಶಿಕ್ಷಕರಾಗಿದ್ದಾರೆ. ಅವರ ಪತ್ನಿ ನಿಸಾ, ಮರಂಚೇರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿ. ಪುತ್ರ ಕೃಷ್ಣದತ್.
ನಿನ್ನೆ, ಮಧ್ಯಾಹ್ನ ಪೂಜೆಯ ನಂತರ, ತಂತ್ರಿ ಪಿ. ಸಿ. ದಿನೇಶನ್ ನಂಬೂದಿರಿಪಾಡ್ ಅವರ ಸಮ್ಮುಖದಲ್ಲಿ ನಡೆದ ಈ ಡ್ರಾವನ್ನು ಮೇಲ್ಶಾಂತಿ ಪುತ್ತುಮನ ಶ್ರೀಜಿತ್ ನಂಬೂದಿರಿ ನಡೆಸಿಕೊಟ್ಟರು.





