ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯಿತಿಯ 2025-26ನೇ ಸಾಲಿನ ಮಿಗತೆ ಬಜೆಟನ್ನು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಎ ಅಶ್ರಫಲಿ ಶನಿವಾರ ಮಂಡಿಸಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಅದ್ಯಕ್ಷೆ ಸೈಮಾ ಸಿ.ಎ ಅಧ್ಯಕ್ಷತೆ ವಹಿಸಿದ್ದರು.
ಒಟ್ಟು 499025919ರೂ. ಆದಾಯ ನಿರೀಕ್ಷಚೆ ಹೊಂದಿದ ಹಾಗೂ 497036970 ರೂ. ಖರ್ಚು ಅಂದಾಜಿಸಿರುವ 504849ರೂ. ಮಿಗತೆ ಬಜೆಟ್ ಇದಾಗಿದೆ. ಉತ್ಪಾದನಾ ವಲಯಕ್ಕೆ 5902500ರೂ, ವಸತಿ ನಿರ್ಮಾಣಕ್ಕೆ 2.43ಕೋಟಿ, ಮಾಲಿನ್ಯ ನಿರ್ಮೂಲನೆಗೆ 1.10ಕೋಟಿ, ಎಸ್‍ಸಿ-ಎಸ್‍ಟಿ ವಿಭಾಗದ ಅಬಿವೃದ್ಧಿಗೆ 1.31ಕೋಟಿ, ಸಾರ್ವಜನಿಕ ಕಟ್ಟಡ, ಸಏತುವೆ, ರಸ್ತೆ,ಸಾರ್ವಜನಿಕ ಸ್ಥಳದಲ್ಲಿ ವಿದ್ಯುತ್ ವಿತರಣೆಗಾಗಿ 2.44ಕೋಟಿ ರೂ. ಮೀಸಲಿರಿಸಲಾಗಿದೆ.
ಕನ್ನಡದಲ್ಲಿಲ್ಲ ಬಜೆಟ್ ಪುಸ್ತಕ:
ಕಾಸರಗೋಡು ಬ್ಲಾಕ್ ಪಂಚಾಯಿತಿ ಬಜೆಟ್ ಪುಸ್ತಕ ಕನ್ನಡದಲ್ಲಿ ಪ್ರಕಟಿಸದೆ ಕನ್ನಡಿಗರಿಗೆ ವಂಚನೆಯೆಸಗಿರುವ ಬಗ್ಗೆ ಪ್ರತಿಪಕ್ಷ ಮುಖಂಡ ಸುಕುಮಾರ್ ಕುದ್ರೆಪ್ಪಾಡಿ ಅವರು ಸಭೆಯಲ್ಲಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ಬ್ಲಾಕ್ ಪಂಚಾಯಿತಿಗೆ ಮನವರಿಕೆ ಮಾಡುತ್ತಾ ಬಂದಿದ್ದರೂ, ಅಧಿಕಾರಿಗಳು ಸಾಪ್ಟ್‍ವೇರ್‍ನ ತಾಂತ್ರಿಕ ದೋಷದ ಬಗ್ಗೆ ಪ್ರಸ್ತಾಪಿಸಿ ಕನ್ನಡದಲ್ಲಿ ಬಜೆಟ್ ಪುಸ್ತಕ ಪ್ರಕಟಿಸುವುದನ್ನು ಮುಂದೂಡುತ್ತಾ ಬಂದಿದ್ದರೆ. ಈ ಕ್ರಮ ಸರಿಯಲ್ಲ ಎಂದು ತಿಳಿಸಿದರು. ಮಹಿಳೆಯರಿಗಾಗಿ ಪರಿಣಾಮಕಾರಿಯಾಗಿ ಜಾರಿಗೆ ತರಬಹುದಾಗಿದ್ದ ಸ್ವ ಉದ್ಯೋಗ ಯೋಜನೆಯ ಬಗ್ಗೆಯೂ ಅಗತ್ಯ ಕಾಳಜಿ ವಹಿಸದಿರುವ ಹಾಗೂ ಯುವಜನತೆಗೆ ಪ್ರತ್ಯೇಕ ಯೋಜನೆ ತಯಾರಿಸುವ ಬಗ್ಗೆ ಆಡಳಿತ ಮುಂದಗದಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ವಿಶೇಷ ಚರ್ಚೆಗಳಿಲ್ಲದೆ ಬಜೆಟ್ ಅಂಗೀಕರಿಸಲಾಯಿತು. ಬ್ಲಾಕ್ ಪಂಚಾಯಿತಿ ಸ್ಥಾಯೀ ಸಮಿತಿ ಸದಸ್ಯರು, ಬ್ಲಾಕ್ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಲಾಕ್ ಪಂಚಾಯಿತಿ ಸಇಬ್ಬಂದಿ ಉಪಸ್ಥಿತರಿದ್ದರು.





