ಕಾಸರಗೋಡು: ಕೇರಳ ಕೃಷಿ ಕಾರ್ಮಿಕ ಕಲ್ಯಾಣ ನಿಧಿಯ ಸದಸ್ಯರಾಗಿರುವ ಮಕ್ಕಳಲ್ಲಿ ಉನ್ನತ ಶಿಕ್ಷಣ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ ಕಾಞಂಗಾಡಿನಲ್ಲಿರುವ ಕ್ಷೇಮ ನಿಧಿ ಜಿಲ್ಲಾ ಕಛೇರಿಯಲ್ಲಿ ಜರುಗಿತು.
ಕೇರಳ ರೈತರ ಕಾರ್ಮಿಕ ಮಂಡಳಿ ಅಧ್ಯಕ್ಷ ಎನ್. ಚಂದ್ರನ್ ಆರ್ಥಿಖ ನೆರವು ವಿತರಿಸಿದರು. ಕೇರಳ ಕಾರ್ಮಿಕ ಕಲ್ಯಾಣ ನಿಧಿ ಮಂಡಳಿ ನಿರ್ದೇಶಕ ಬಂಗಳ ಕುಞÂಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದರು. ಕೆ.ಎಸ್.ಕೆ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಕೆ. ವಿ ಕುಞÂರಾಮನ್, ಬಿ.ಕೆ.ಎಂ.ಯು ಜಿಲ್ಲಾ ಕಾರ್ಯದರ್ಶಿ ಎಂ. ಕುಮಾರನ್, ಡಿ.ಕೆ.ಟಿ.ಎಫ್ ಜಿಲ್ಲಾ ಅಧ್ಯಕ್ಷ ಎ ವಾಸುದೇವನ್ ನಾಯರ್, ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷವಿ. ವಿ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ಪದವಿ, ಸ್ನಾತಕೋತ್ತರ ಪದವಿ, ಟಿ.ಟಿ.ಸಿ, ಐ.ಟಿ.ಐ, ಪಾಲಿಟೆಕ್ನಿಕ್, ಪ್ಯಾರಾಮೆಡಿಕಲ್, ಬಿ.ಎಡ್ ಮೊದಲಾದ ಕೋರ್ಸ್‍ಗಳಲ್ಲಿ ಪ್ರಥಮ ಅವಕಾಶದಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ 21 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.





