ಆಲೆಪ್ಪಿ: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್)ನ ಕೇರಳ ರಾಜ್ಯ ಸಮ್ಮೇಳನ ಇತ್ತೀಚೆಗೆ ಆಲೆಪ್ಪಿಯಲ್ಲಿ ನಡೆಯಿತು.
ಏಪ್ರಿಲ್, ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಆದಾಯ ಕಡಿಮೆ ಇರುವ ಕಲಾ ಕ್ಷೇತ್ರದ ವಿವಿಧ ವಲಯಗಳಲ್ಲಿರುವವರಿಗೆ ಸಾಂಸ್ಕøತಿಕ ಕಲ್ಯಾಣ ನಿಧಿ ಮಂಡಳಿಯ ಮೂಲಕ ಆರ್ಥಿಕ ನೆರವು ನೀಡಲು ಸಮ ಸ್ವಸ್ವ ಸಂಪಾದ್ಯ ಯೋಜನೆಯನ್ನು ಪ್ರಾರಂಭಿಸಬೇಕೆಂದು ಕೇರಳದ ರಂಗ ಕಲಾವಿದರು ಮತ್ತು ಕಾರ್ಮಿಕರ ಸಂಘ (ಸವಾಕ್) ರಾಜ್ಯ ಸಮ್ಮೇಳನ ಒತ್ತಾಯಿಸಿದೆ.
ಪ್ರತಿನಿಧಿ ಸಭೆಯನ್ನು ಶಾಸಕ ಪಿ.ಪಿ.ಸಿ. ತರಂಜನ್ ಉದ್ಘಾಟಿಸಿದರು. ಜಿ.ಕೆ. ಪಿಳ್ಳೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕÀ ಎಚ್. ಸಲಾಂ, ಸವಾಕ್ ರಾಜ್ಯ ಕಾರ್ಯದರ್ಶಿ ಸುದರ್ಶನನ್ ವರ್ಣಂ, ವಿ. ಜಯನ್ ಮಾವುಂಗಾಲ್, ನೆಡುಮುಡಿ ಅಶೋಕ್ ಕುಮಾರ್, ಪಿ.ಪಿ. ವಿಜಯನ್, ವಿನೋದ್ ಕುಮಾರ್ ಅಚುಂಬಿತಾ, ಅಜಿ ಚಾಲಕೇರಿಲ್, ದಿಲೀಪ್ ಚೆರಿಯನಾಡು, ಪಿ.ಪಿ. ಗೀತಾ, ಪಿ.ಟಿ. ಜುಬೇರ್, ಉಮೇಶ್ ಎಂ ಸಾಲ್ಯಾನ್ ಕಾಸರಗೋಡು ಮಾತನಾಡಿದರು.
ಈ ಸಂದರ್ಭ ನೂತನ ರಾಜ್ಯ ಸಮಿತಿ ರಚಿಸಲಾಗಿದ್ದು, ಪದಾಧಿಕಾರಿಗಳು: ಜಿ.ಕೆ. ಪಿಳ್ಳೈ(ಅಧ್ಯಕ್ಷರು), ಪಿ.ಟಿ. ಸುಬೈರ್, ನೆಡುಮುಡಿ ಅಶೋಕ್ ಕುಮಾರ್, ವಿಜಯನ್ ಮಾವುಂಗಾಲ್, ಪ್ರಸಾದ್ ಅರಕ್ಕಲ್, ಪಿ. ಪಿ. ಗೀತಾ ( ಅಧ್ಯಕ್ಷರು), ಸುದರ್ಶ ವರ್ಣಂ (ಪ್ರ. ಕಾರ್ಯದರ್ಶಿ), ವಿನೋದ್ ಕುಮಾರ್ ಅಚುಂಬಿತಾ, ಅಜಿ ಚಾಲಕೇರಿಲ್, ದಿಲೀಪ್ ಚೆರಿಯನಾಟ್, ಜಾಯ್ಸ್ ಸಾಹಿನಿ, ಪಿ.ಪಿ.ವಿ. ಜಯನ್, ವಿ.ಎ. ವಿನ್ಸೆಂಟ್ (ಕಾರ್ಯದರ್ಶಿ), ಉಮೇಶ್ ಎಂ. ಸಾಲಿಯನ್ (ಖಜಾಂಚಿ)ಆಯ್ಕೆಯಾದರು.
ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿ ಕುಮಾರಿ ಸುಕುಮಾರನ್ ಮತ್ತು ಕಾರ್ಯದರ್ಶಿಯಾಗಿ ಗೀತಾ ಉಣ್ಣಿಕೃಷ್ಣನ್ ಆಯ್ಕೆಯಾದರು.
ಕಾಸರಗೋಡಿನ ಪ್ರತಿನಿಧಿಗಳಾಗಿ ಜೀನ್ ಲವೀನಾ ಮೊಂತೇರ, ಸುಜಾತ, ಮೋಹಿನಿ ಕೊಪ್ಪಳ, ಯಶೋಧ, ಅರುಣಾವತಿ, ನಳಿನಾಕ್ಷಿ, ನರಸಿಂಹ ಬಲ್ಲಾಳ್,ೀ ದಿವಾಕರ ಅಶೋಕನಗರ, ವಾಸು ಬಾಯಾರು, ಅಪ್ಪಕುಂಞÂ್ಞ ಮಣಿಯಾಣಿ, ದಯಾ ಪ್ರಸಾದ್ ಪಿಲಿಕುಂಜೆ, ಎಂ ಎಂ ಗಂಗಾಧರನ್, ಮನೋಜ್ ಪಳ್ಳಿಕ್ಕೆರೆ, ಬಿನು ತೋಮಸ್, ಸುರೇಶ್ ಯಾದವ್, ರವೀಂದ್ರನ್ ಪಾಡಿ ಭಾಗವಹಿಸಿದ್ದರು.






