ಕಾಸರಗೋಡು: ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವ ಹಿನೆಲೆಯಲ್ಲಿ ``ಮಾದಕ ಮುಕ್ತ ಕೇರಳ'ಯೋಜನೆಯನ್ವಯ ಅಬಕಾರಿ ಇಲಾಖೆ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಮದ್ಯಪಾನ, ಮರಕ ಮಾದಕ ದ್ರವ್ಯಗಳ ಸೇವನೆ ಸಾಮಾಜಿಕ ಪಿಡುಗಾಗುತ್ತಿದ್ದು, ಇದರ ಗಂಭೀರತೆಯ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ವಿಮುಕ್ತಿಲಹೆಸರಿನ ಮಾದಕ ದ್ರವ್ಯ ವಿರೋಧಿ ಅಭಿಯಾನ ಆರಂಭಿಸಲಾಗಿದೆ. ಆಲ್ಕೋಹಾಲ್, ಡ್ರಗ್ಸ್ ಮತ್ತು ತಂಬಾಕಿನ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ಅಕ್ರಮ ಮಾದಕ ದ್ರವ್ಯದ ದಾಸ್ತಾನು ಮತ್ತು ಕಳ್ಳಸಾಗಣೆಯ ಮೂಲಗಳನ್ನು ಗುರುತಿಸಿ, ಇದರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಅಂಗವಾಗಿ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿಗಳು, ಸಮಾಲೋಚನೆ, ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಅಬಕಾರಿ ಇಲಾಖೆ ಆಯೋಜಿಸುತ್ತಿದೆ.
ಶಾಲೆಗಳನ್ನು ಮಾದಕ ದ್ರವ್ಯ ಮುಕ್ತವಾಗಿಸುವುದು, ವಿದ್ಯಾರ್ಥಿಗಳು ಮಾದಕ ದ್ರವ್ಯ ಬಳಕೆ ಮಾಡದಿರುವಂತೆ ಮತ್ತು ವಿದ್ಯಾರ್ಥಿಗಳನ್ನು ಇತರ ರಚನಾತ್ಮಕ ಕ್ಷೇತ್ರಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರ ಜತೆಗೆ ಅವರಲ್ಲಿ ಕೌಶಲ್ಯ ಮೂಡಿಸುವ ಕೆಲಸವನ್ನು 'ಜಾಗೃತಿ'ಯೋಜನೆಯನ್ವಯ ನಡೆಸಲಾಗುತ್ತಿದೆ. ಈ ಯೋಜನೆಯು ಶಾಲೆಗಳಲ್ಲಿ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆಯನ್ನು ನೀಡಲು ಮತ್ತು 'ವ್ಯಸನದ ವಿರುದ್ಧ ಕ್ರೀಡೆ' ಎಂಬ ಘೋಷಣೆಯಡಿಯಲ್ಲಿ ಜಿಮ್ ಸೌಲಭ್ಯ ಮತ್ತು ಕ್ರೀಡಾ ಸಾಮಗ್ರಿ ವಿತರಿಸುವ ಗುರಿಯೊಂದಿಗೆ ಯೋಜನೆ ಜಾರಿಗೊಳಿಸಲಾಗುತ್ತಿದೆ. "ಜಾಗೃತಿ" ಯೋಜನೆಯ ಅಂಗವಾಗಿ ಇಳಂಬಚ್ಚಿ ಗುರು ಚಂತು ಪಣಿಕ್ಕರ್ ಸ್ಮಾರಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಿಸಲಾದ ವ್ಯಾಯಾಮ ಶಾಲೆಯನ್ನು ಶಾಸಕ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದೆಕಲೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಪೆÇ್ರೀತ್ಸಾಹಿಸುವ ಮೂಲಕ ಅವರನ್ನು ಮತ್ತೆ ಅಧ್ಯಯನಕ್ಕೆ ತಡೆಯಲು ಮತ್ತು ತಿರುಗಿಸಲು ಅಬಕಾರಿ ಇಲಾಖೆಯ ವಿಮುಕ್ತಿ ಮಿಷನ್‍ನ ವಿನೂತನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.






