ಪೆರ್ಲ: ಕೊಳತ್ತೂರಿನಿಂದ ಸೆರೆಹಿಡಿದ ಚಿರತೆಯನ್ನು ಎಣ್ಮಕಜೆ-ಬೆಳ್ಳೂರು ಗ್ರಾಮ ಪಂಚಾಯಿತಿ ಗಡಿ ಪ್ರದೇಶದಲ್ಲಿ ಬಿಟ್ಟ ನಾಲ್ಕನೇ ದಿನ ನಾಡಿನ ಜನತೆಯಲ್ಲಿ ಆತಂಕ ಹೆಚ್ಚಾಗತೊಡಗಿದೆ. ಆಸುಪಾಸಿನ ಶಾಲೆ, ಅಂಗನವಾಡಿಗಳಿಗೆ ವಿದ್ಯಾರ್ಥಿಗಳ ಸಂಕ್ಯೆ ದಿನಕಳೆದಂತೆ ಕುಸಿಯತೊಡಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಕೆಲಸಕ್ಕೆ ತೆರಳಲೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಜಾನುವಾರುಗಳನ್ನು ಮೇವಿಗೆ ಬಡಲಾಗದ ಪರಿಸ್ಥಿತಿಯಿದೆ. ಭಯದ ವಾತಾವರಣದಿಂದ ಜನರಿಗೆ ಮನೆಯಿಂದ ಹೊರಬರಲೂ ಸಾದ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ಪಡ್ರೆ, ವಾಣಿನಗರ ಅಸುಪಾಸಿನ ಜನತೆ ಪಡ್ರೆ ಸರ್ಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಜಾಗ್ರತಾ ಸಭೆಯಲ್ಲಿ ತಮ್ಮ ಆತಂಕವನ್ನು ಹೊರಹಾಕಿದ್ದಾರೆ.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಪ್ ಮಾತನಾಡಿ, ಅರನ್ಯ ಇಲಾಖೆಯ ತಪ್ಪಿನಿಂದಗಿ ಊರಿನ ಜನತೆ ಭೀತಿಗೊಳಗಾಗಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ, ಮಹಿಳೆಯರ ಸಹಿತ ಜನ ಸಾಮಾನ್ಯರ ಆತಂಕವನ್ನು ದೂರೀಕರಿಸಲು ಆರಂಭದಿಂದಲೂ ಪ್ರಯತ್ನ ನಡೆಸುತ್ತಾ ಬರಲಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗದಿದ್ದಲ್ಲಿ ಊರವರನ್ನು ಒಟ್ಟುಸೇರಿಸಿ ಹೋರಾಟ ನಡೆಸಲು ಪಂಚಾಯಿತಿ ಮುಂದಾಗಲಿದೆ ಎಂದು ತಿಳಿಸಿದರು.
ಚಿರತೆ ಸಂಚಾರದ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಸೈಬರ್ ಸೆಲ್ ಮೂಲಕ ಇವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಜನರ ಭೀತಿ ದೂರೀಕರಿಸಲು ಇಲಾಖೆ ಬದ್ಧವಾಗಿದ್ದು, ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಫಾರೆಸ್ಟ್ ಅಧಿಕಾರಿ ಅಶ್ರಫ್ ತಿಳಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ. ಸದಸ್ಯರಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ,ಮಾಜಿ ಪಂ.ಸದಸ್ಯ ರವಿ ವಾಣಿನಗರ, ಹಿರಿಯ ಪತ್ರಕರ್ತ ಶ್ರೀಪಡ್ರೆ, ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವಾಸುದೇವ ನಾಯಕ್, ರೇಂಜ್ ಪಾರೆಸ್ಟ್ ಆಫಿಸರ್ ವಿನೋದ್ ಕುಮಾರ್ ಸಿ.ವಿ, ಸೆಕ್ಷನ್ ಪಾರೆಸ್ಟ್ ಆಫೀಸರ್ ವಿನೋದ್, ಪಿ.ಎಫ್ ಅರುಣ್,ಆರ್ ಆರ್ ಟಿ ಸೆಕ್ಷನ್ ಅಧಿಕಾರಿಗಳಾದ ಜಯ ಕುಮಾರ್, ರಾಜು, ಅಂಗನವಾಡಿ, ಹಸಿರು ಕ್ರಿಯಾ ಸೇನೆ, ಆಶಾ ಕಾರ್ಯಕರ್ತೆಯರು, ಊರ ನಾಗರಿಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ 1)ಚಿರತೆ ಕಾಡಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಪಡ್ರೆ ಸರ್ಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಜಾಗ್ರತಾ ಸಭೆಯಲ್ಲಿ ಶಾಸಕ ಎ.ಕೆ.ಎಂ ಅಶ್ರಫ್ ಮಾತನಾಡಿದರು.
ಚಿತ್ರ 02); ಜಾಗ್ರತಾ ಸಭೆಯಲ್ಲಿ ಎಣ್ಮಕಜೆ ಗ್ರಾಪಂ ಅದ್ಯಕ್ಷ ಜೆ.ಎಸ್ ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.






