ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಲ್ಲಂಗೈ ಎಂಬಲ್ಲಿ ರೋಡ್‍ರೋಲರ್ ಹಿಂಭಾಗಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಒಬ್ಬಾತ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಮಲಪ್ಪುರಂ ತಿರೂರಂಗಾಡಿ ಮಂಬರ ನಿವಾಸಿ ಮೆಹಬೂಬ(32) ಮೃತಪಟ್ಟ ಯುವಕ. ಇವರ ಜತೆಗಿದ್ದಾತ ಗಂಭೀರ ಗಾಯಗೊಂಡಿದ್ದು, ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಭಾಗದಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕಾರು, ಕಲ್ಲಂಗೈಯಲ್ಲಿ ಎದುರು ಸಂಚರಿಸುತ್ತಿದ್ದ ರೋಡ್‍ರೋಲರ್‍ಗೆ ಡಿಕ್ಕಿಯಾಗಿ, 50ಮೀಟರ್‍ನಷ್ಟು ಹಿದಕ್ಕೆ ಚಲಿಸಿ ನಿಂತಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತ ನಡೆದ ತಕ್ಷಣ ಇಬ್ಬರನ್ನೂ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ, ಮೆಹಬೂಬ್ ಮೃತಪಟ್ಟಿದ್ದರು. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.






