ಬದಿಯಡ್ಕ: ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಗೆ ವ್ಯಾಪಕ ಪ್ರಮಾಣದ ಸಾಲು ಸವಾಲುಗಳು ಇತ್ತೀಚೆಗೆ ನಿತ್ಯನಿರಂತರವಾಗಿದ್ದು, ನಮ್ಮ ಮಣ್ಣಿನ ಅಸ್ಮಿತೆಯನ್ನು ಕಾಪಿಡುವ ನಿಟ್ಟಿನಲ್ಲಿ ಸಮರೋಪಾದಿಯ ಕಾರ್ಯಚಟುವಟಿಕೆ ಸನ್ನದ್ಧತೆಯಲ್ಲಿರಬೇಕು. ಗುಂಪು-ಗುಂಪುಗಳಾಗಿ ವಿಭಜನೆಗೊಂಡಿರುವ ಕನ್ನಡದ ಸನ್ಮನಸ್ಸುಗಳು ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾದಾಗ ಸವಾಲುಗಳಿಗೆ ಉತ್ತರಿಸಲು ಸಾಧ್ಯ ಎಂದು ಕ.ಸಾ.ಪ.ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಸಹಕಾರದೊಂದಿಗೆ ಶನಿವಾರ ಅಪರಾಹ್ನ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಆಯೋಜಿಸಿದ್ದ ಎಂ.ಕೆ.ಜಯಚಂದ್ರ ದತ್ತಿ ಹಾಗೂ ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಎಂ.ಕೆ.ಜಯಚಂದ್ರ ಮಾಸ್ತರ್ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ವಿಷಯದಲ್ಲಿ ಆಯಿಷಾ ಪೆರ್ಲ ಹಾಗೂ ಕಮಲಮ್ಮ ದತ್ತಿ ಉಪನ್ಯಾಸದಲ್ಲಿ ಡಾ.ಸುಭಾಷ್ ಪಟ್ಟಾಜೆ ಅವರು ಕನ್ನಡ ಕಥಾ ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ವಿಷಯದಲ್ಲಿ ಉಪನ್ಯಾಸ ನೀಡಿದರು. ಈ ಸಂದರ್ಭ ಕನ್ನಡ ರಕ್ಷಣಾ ವೇದಿಕೆ ಅಡೂರು ಸಮಿತಿ ಸದಸ್ಯೆ ನಯನಾ ಗಿರೀಶ್ ಅಡೂರು ಅವರನ್ನು ಕನ್ನಡ ಹಕ್ಕು ರಕ್ಷಣೆ ಹೋರಾಟಕ್ಕೆ ನೀಡುತ್ತಿರುವ ಕೊಡುಗೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಪ್ರಾರ್ಥಸಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬಳಿಕ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಸಂವಾದ ನಡೆಯಿತು.




.jpg)

