HEALTH TIPS

1 ತಾಸಲ್ಲಿ ನಗದು ರಹಿತ ಆರೋಗ್ಯ ವಿಮೆ ಕ್ಲೇಮ್‌ ಶೀಘ್ರ ಸಾಕಾರ?, 2047ರ ವೇಳೆಗೆ ಆರೋಗ್ಯ ವಿಮೆ ಬಳಕೆ ಹೇಗಿರಲಿದೆ?

ನವದೆಹಲಿ : ಆರೋಗ್ಯ ವಿಮೆ ಕ್ಲೇಮು ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ನಗದುರಹಿತ ವಿಮೆ ಪಾವತಿ ಬೇಡಿಕೆಯನ್ನು 1 ಗಂಟೆಯಲ್ಲಿ ಅನುಮೋದಿಸುವುದು ಮತ್ತು 3 ಗಂಟೆಗಳಲ್ಲಿ ಅಂತಿಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

2047ರ ವೇಳೆಗೆ ಆರೋಗ್ಯ ವಿಮೆಯ ಬಳಕೆಯನ್ನು ದೇಶಾದ್ಯಂತ ವಿಸ್ತರಿಸುವ ಮತ್ತು ಗ್ರಾಹಕರಲ್ಲಿ ವಿಶ್ವಾಸವನ್ನು ಬಲಗೊಳಿಸುವುದು ಇದರ ಉದ್ದೇಶ. ಇದರ ಭಾಗವಾಗಿ, ಗ್ರಾಹಕರಿಗೆ ಅರ್ಥೈಸಿಕೊಳ್ಳಲು ಮತ್ತು ಬಳಸಲು ಅನುಕೂಲವಾಗುವಂತೆ ವಿಮೆಯ ಅರ್ಜಿಗಳನ್ನು ಸರಳೀಕರಿಸಲು ಏಜೆನ್ಸಿಗಳಿಗೆ ಸೂಚಿಸಲಾಗುವುದು ಎನ್ನಲಾಗಿದೆ. ಈ ನಿರ್ಧಾರದಿಂದಾಗಿ, ಜನರಲ್ಲಿ ವಿಮೆಯ ಪ್ರತಿ ವಿಶ್ವಾಸ ವೃದ್ಧಿಯಾಗಿ, ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ವೆಚ್ಚ ಅತಿಕಡಿಮೆ:
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತೀಯರು ಆರೋಗ್ಯದ ಮೇಲೆ ಅತಿ ಕಡಿಮೆ ಖರ್ಚು ಮಾಡುತ್ತಿದ್ದಾರೆ. 2013-14 ಅವಧಿಯಲ್ಲಿ ಶೇ.3.9ರಷ್ಟು ವಿಮೆದಾರರು ಇದ್ದರೆ, 2022-23ರ ಹೊತ್ತಿಗೆ ಇದು ಕೇವಲ ಶೇ.4ಕ್ಕೆ ಏರಿಕೆಯಾಗಿದೆ. ಇದು ಬ್ರೆಜಿಲ್‌, ಶ್ರೀಲಂಕಾ, ಥಾಯ್ಲೆಂಡ್‌ಗಿಂತಲೂ ಕಡಿಮೆ.

ಅತ್ತ, ದೇಶದಲ್ಲಿ ಮನವಿ ಸಲ್ಲಿಕೆಯಾದರೂ ಇತ್ಯರ್ಥವಾಗದೆ ಅಥವಾ ಪಾವತಿಯಾಗದೆ ಉಳಿದ ವಿಮೆಯ ಸಂಖ್ಯೆ 2023ರಲ್ಲಿ 17.5 ದಶಲಕ್ಷದಷ್ಟಿದ್ದು, ಅದು 2024ರ ಮಾರ್ಚ್‌ ವೇಳೆಗೆ 25 ದಶಲಕ್ಷಕ್ಕೆ ತಲುಪಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries