ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯಲಿದ್ದು, ಕೇಂದ್ರದ ಹಿರಿಯ ಸಚಿವರು ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್ ಕುಟುಂಬವನ್ನು ಸ್ವಾಗತಿಸಲಿದ್ದಾರೆ. ಬಳಿಕ ದೆಹಲಿ ಜೊತೆಗೆ ಜೈಪುರ ಮತ್ತು ಆಗ್ರಾಕ್ಕೆ ವ್ಯಾನ್ಸ್ ಪ್ರಯಾಣಿಸಲಿದ್ದಾರೆ. ಈ ಸಂದರ್ಭದಲ್ಲಿ ಪೆಂಟಗನ್‌ನ ಐವರು ಹಿರಿಯ ಅಧಿಕಾರಿಗಳು ವ್ಯಾನ್ಸ್ ಜೊತೆಗಿರಲಿದ್ದಾರೆ.
ದೆಹಲಿಗೆ ಬಂದ ಕೆಲ ಗಂಟೆಗಳ ಬಳಿಕ ವ್ಯಾನ್ಸ್ ಮತ್ತು ಅವರ ಕುಟುಂಬ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದೆ. ಜೊತೆಗೆ ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಶಾಪಿಂಗ್ ಕಾಂಪ್ಲೆಕ್ಸ್ ಭೇಟಿ ನೀಡಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಸೋಮವಾರ ಸಂಜೆ 6:30ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತ-ಯುಎಸ್ ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಭಾರತದ ಮೇಲಿನ ಸುಂಕದ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.




