HEALTH TIPS

ಮೇ.1ರಿಂದ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಜಾರಿ ಬಗ್ಗೆ NHAI ಸ್ಪಷ್ಟನೆ

ನವದೆಹಲಿ:  ಮುಂಬರುವ ಮೇ.1ರಿಂದ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲಿಂಗ್‌ನ್ನು ಅನುಷ್ಠಾನಗೊಳಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವು ಮಾಧ್ಯಮಗಳು ಉಪಗ್ರಹ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಮೇ.1 ರಿಂದ ಪ್ರಾರಂಭಿಸಲಾಗುವುದು ಮತ್ತು ಅಸ್ತಿತ್ವದಲ್ಲಿರುವ ಫಾಸ್ಟ್‌ ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಬದಲಾಯಿಸಲಿದೆ ಎಂದು ವರದಿ ಮಾಡಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದಿದೆ.

ಟೋಲ್ ಪ್ಲಾಜಾಗಳ ಮೂಲಕ ವಾಹನಗಳ ಸುಗಮ, ತಡೆರಹಿತ ಚಲನೆಯನ್ನು ಸಕ್ರಿಯಗೊಳಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಆಯ್ದ ಟೋಲ್ ಪ್ಲಾಜಾಗಳಲ್ಲಿ ANPR&FASTag & ಆಧಾರಿತ ತಡೆ-ಕಡಿಮೆ ಟೋಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಹೇಳಿದೆ.

ಸುಧಾರಿತ ಟೋಲಿಂಗ್ ವ್ಯವಸ್ಥೆಯು ಸ್ವಯಂಚಾಲಿತ ಸಂಖ್ಯೆ ಪ್ಲೇಟ್ ಗುರುತಿಸುವಿಕೆ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ. ಅದು ವಾಹನಗಳನ್ನು ಅವುಗಳ ಸಂಖ್ಯೆ ಪ್ಲೇಟ್‌ಗಳನ್ನು ಓದುವ ಮೂಲಕ ಗುರುತಿಸುತ್ತದೆ ಮತ್ತು ಟೋಲ್ ಕಡಿತಕ್ಕಾಗಿ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಬಳಸುವ ಅಸ್ತಿತ್ವದಲ್ಲಿರುವ FASTag ವ್ಯವಸ್ಥೆಯನ್ನು ಸಂಯೋಜಿಸುತ್ತದೆ.

ಇದರ ಅಡಿಯಲ್ಲಿ, ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಆಗತ್ಯವಿಲ್ಲದೆ, ಹೆಚ್ಚಿನ ಕಾರ್ಯಕ್ಷಮತೆಯ ಅಫೆಕ್ಕಿ ಕ್ಯಾಮೆರಾಗಳು ಮತ್ತು FASTag ರೀಡರ್‌ಗಳ ಮೂಲಕ ಗುರುತಿಸುವಿಕೆಯ ಆಧಾರದ ಮೇಲೆ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತದೆ. ನಿಯಮ ಪಾಲಿಸದಿದ್ದಲ್ಲಿ, ಉಲ್ಲಂಘಿಸುವವರಿಗೆ ಇ-ನೋಟಿಸ್‌ಗಳನ್ನು ನೀಡಲಾಗುತ್ತದೆ, ಅದನ್ನು ಪಾವತಿಸದಿದ್ದರೆ FASTag ಮತ್ತು ಇತರ VAHAN ಸಂಬಂಧಿತ ದಂಡಗಳನ್ನು ಅಮಾನತುಗೊಳಿಸಬಹುದು ಎಂದು ಸಚಿವಾಲಯ ಹೇಳಿದೆ.

ಆಯ್ದ ಟೋಲ್ ಪ್ಲಾಜಾಗಳಲ್ಲಿ ಸ್ಥಾಪಿಸಲಾಗುವ 'ANPR&FASTag& ಆಧಾರಿತ ತಡೆ-ಕಡಿಮೆ ಟೋಲಿಂಗ್ ವ್ಯವಸ್ಥೆಟಿ ಅನುಷ್ಠಾನಕ್ಕಾಗಿ ಫೆವಿಅಐ ಬಿಡ್ ಗಳನ್ನು ಆಹ್ವಾನಿಸಿದೆ. ಈ ವ್ಯವಸ್ಥೆಗೆ ಬಳಕೆದಾರರ ಕಾರ್ಯಕ್ಷಮತೆ, ದಕ್ಷತೆ ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ, ದೇಶಾದ್ಯಂತ ಇದರ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries