HEALTH TIPS

ವಿವಿಪ್ಯಾಟ್ ಸ್ಲಿಪ್‌ಗಳ ಶೇ.100ರಷ್ಟು ಏಣಿಕೆ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ವಿವಿಪ್ಯಾಟ್ ಯಂತ್ರದಲ್ಲಿನ ಶೇ.100ರಷ್ಟು ಮತದಾನ ದೃಢೀಕರಣ ಪತ್ರಗಳನ್ನು ಭೌತಿಕವಾಗಿ ಏಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಈ ವಿಯವಾಗಿ ದಿಲ್ಲಿ ಹೈಕೋರ್ಟ್ 2024ರ ಆಗಸ್ಟ್‌ನಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಹಂಸ್ ರಾಜ್ ಜೈನ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್‌ಕುಮಾರ್ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು.

ದಿಲ್ಲಿ ಹೈಕೋರ್ಟ್‌ ನ ತೀರ್ಪಿಗೆ ಸಂಬಂಧಿಸಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ಭಾರತದ ಮುಖ್ಯನ್ಯಾಯಮೂರ್ತಿಯವರು ವಿಶೇಷ ರಜಾಕಾಲದ ಅರ್ಜಿಯನ್ನು ತಳ್ಳಿಹಾಕುತ್ತಾ ಹೇಳಿದರು.

ತನ್ನ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಈ ಹಿಂದೆಯೂ ಇದೇ ವಿಷಯಕ್ಕೆ ಸಂಬಂಧಿಸಿ ತೀರ್ಪುಗಳನ್ನು ನೀಡಿತ್ತು. ಅದನ್ನು ಪದೇ ಪದೇ ಪ್ರಶ್ನಿಸುವಂತಿಲ್ಲವೆಂದು ಸಿಜೆಐ ಹೇಳಿದ್ದಾರೆ.

ಇಲೆಕ್ಟ್ರಾನಿಕ್ ಮತಯಂತ್ರಗಳು ಸುರಕ್ಷಿತ, ಸರಳ, ಸುಭದ್ರ ಹಾಗೂ ಬಳಕೆದಾರ ಸ್ನೇಹಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಿಸಿತು.

ಈ ವಿಷಯವಾಗಿ ದಿಲ್ಲಿ ಹೈಕೋರ್ಟ್ ಕಳೆದ ವರ್ಷ ಆಗಸ್ಟ್ 12ರಂದು ನೀಡಿದ ಆದೇಶದಲ್ಲಿ ವಿವಿಪ್ಯಾಟ್‌ಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ಹಿಂದಿನ ಆದೇಶವನ್ನು ಪ್ರಸ್ತಾವಿಸುತ್ತಾ ಹಂಸರಾಜ್ ಜೈನ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಈ ತೀರ್ಪಿನ ಪರಾಮರ್ಶೆಯನ್ನು ಕೋರಿದ ಅರ್ಜಿಯನ್ನು ಅದು ತಳ್ಳಿಹಾಕಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries