ಕಠ್ಮಂಡು: ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ 'ಸಾಮುದಾಯಿಕ ಅಭಿವೃದ್ಧಿ ಯೋಜನೆ'ಗಳನ್ನು ಜಾರಿ ಮಾಡಲು ಭಾರತವು ನೇಪಾಳಕ್ಕೆ ₹62.5 ಕೋಟಿ ಆರ್ಥಿಕ ನೆರವು ನೀಡಲಿದೆ. ಈ ಸಂಬಂಧ ಎರಡೂ ದೇಶಗಳು 10 ಒಪ್ಪಂದಗಳಿಗೆ ಸಹಿ ಹಾಕಿವೆ.
ಭಾರತ ರಾಯಭಾರ ಕಚೇರಿಯು ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, 'ನೇಪಾಳದಲ್ಲಿ ಮೂರು ಶಾಲೆಗಳು, ಒಂದು ಮಠ, ಒಂದು ಇ-ಗ್ರಂಥಾಲಯ, ಎರಡು ಆಸ್ಪತ್ರೆಗಳನ್ನು ನಿರ್ಮಿಸಲು ಭಾರತವು ನೆರವು ನೀಡುತ್ತಿದೆ' ಎಂದು ಹೇಳಿದೆ.
ಸಾಮುದಾಯಿಕ ಅಭಿವೃದ್ಧಿ ಯೋಜನೆಯಡಿ ಭಾರತವು ನೇಪಾಳದಲ್ಲಿ ಈವರೆಗೂ 573 ಯೋಜನೆಗಳನ್ನು ಕೈಗೆತ್ತಿಕೊಂಡಿದೆ, ಇವುಗಳಲ್ಲಿ 495 ಯೋಜನೆಗಳು ಪೂರ್ಣಗೊಂಡಿವೆ.




