ಕಾಸರಗೋಡು: ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಏಪ್ರಿಲ್ 11 ರಂದು ರಾಜ್ಯ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಬಗೆಗಿನ ಪೂರ್ವತಯಾರಿ ಬಗ್ಗೆ ಕಲ್ಪಿತ ಕಾಯಚರಣೆ ನಡೆಸಲಿದ್ದು, ಈ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಸಿದ್ಧತಾ ಸಭೆ ನಡೆಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆಫ್ಟಿನೆಂಟ್ ಜನರಲ್‍ಸಯ್ಯದ್ ಅತ್ತಾ ಹಸೈನ್ (ನಿವೃತ್ತ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕರಿ(ಎಡಿಎಂ)ಪಿ ಅಖಿಲ್, ಎಂಡೋಲ್ಫಾನ್ ಸೆಲ್ ಡೆಪ್ಯೂಟಿ ಕಲೆಕ್ಟರ್ ಲಿಬು ಎಸ್ ಲಾರೆನ್ಸ್, ಮೀನುಗಾರಿಕಾ ಸಹಾಯಕ ನಿರ್ದೇಶಕ ಎನ್.ಸೋನಿರಾಜ್, ಠಾಣಾಧಿಕಾರಿ ಕೆ.ಹರ್ಷ, ಜೆಎಎಂಒ ವೈದ್ಯ ಪಿ.ರಂಜಿತ್, ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡದ ಸದಸ್ಯರು, ತಾಲೂಕು ತಂಡದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಮಡಕ್ಕರ ಬಂದರು, ಕೊಟ್ಟೋಡಿ ಟೌನ್ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಕಲ್ಲಾರ್ ಮತ್ತು ತುರುತ್ತಿ ಗ್ರಾಮಾಧಿಕಾರಿಗಳು ಕಲ್ಪಿತಕಾರ್ಯಾಚರಣೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
ಎರಡನೇ ಸುತ್ತಿನ ಸಭೆಯನ್ನು ಏಪ್ರಿಲ್ 8 ರಂದು ನಡೆಸಲು ತೀರ್ಮಾನಿಸಲಾಯಿತು. ರಾಜ್ಯ-ಜಿಲ್ಲೆ-ತಾಲೂಕು ಮುಖ್ಯಸ್ಥರೊಂದಿಗೆ ತುರ್ತು ನಿರ್ವಹಣಾ ಕೇಂದ್ರಗಳ ನೇತೃತ್ವದಲ್ಲಿ ಚರ್ಚೆ ನಡೆಯಲಿರುವುದು. ದುರಂತ ಎದುರಿಸುವ ಕಾರ್ಯಾಚರಣೆ ಮತ್ತು ನಿಯಂತ್ರಣ ಕೊಠಡಿಗಳ ಕಾರ್ಯಾಚರಣೆ, ವಿವಿಧ ಇಲಾಖೆಗಳ ಸಮನ್ವಯ, ಸಂವಹನ ಸಾಧನಗಳ ಸೂಕ್ತ ಬಳಕೆ ಮತ್ತು ಅಪಘಾತ ಸ್ಥಳದಲ್ಲಿ ತಕ್ಷಣದ ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಾಚರಣೆಗಳ ಪ್ರಮುಖ ಕಾರ್ಯಗಳು. ಏಪ್ರಿಲ್ 11 ರಂದು ರಾಜ್ಯಾದ್ಯಂತ 13 ಜಿಲ್ಲೆಗಳಲ್ಲಿ 26 ಆಯ್ದ ಸ್ಥಳಗಳಲ್ಲಿ ಏಕಕಾಲದಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಯಲಿದೆ.




