ಕಾಸರಗೋಡು: ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ, ಕೇಂದ್ರ ಸರ್ಕಾರ ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಟಿಎಸ್‍ಎಸ್‍ಸಿ) ನ ಕೇರಳದ ಏಕೈಕ ಶೈಕ್ಷಣಿಕ ಸಂಸ್ಥೆ.
ಪಾಲುದಾರ ಮತ್ತು ತರಬೇತಿ ಸಮಸ್ಥೆ ಬ್ರಿಟ್‍ಕೋ-ಬ್ರಿಡ್‍ಕೋ ಅತ್ಯಾಧುನಿಕ ಲ್ಯಾಬ್ ಸೌಲಭ್ಯಗಳೊಂದಿಗೆ ಕಾಸರಗೋಡಿನಲ್ಲಿ ಚಟುವಟಿಕೆ ಆರಂಭಿಸಲಿರುವುದಾಗಿ ಬ್ರಿಟ್ಕೋ-ಬ್ರಿಡ್ಕೊ ಕಾರ್ಯನಿರ್ವಾಹಕ ನಿರ್ದೇಶಕ ಉಣ್ಣಿಕೃಷ್ಣನ್ ಕಿನಾನೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ. 5ರಂದು ಮಧ್ಯಾಹ್ನ 12ಕ್ಕೆ ಸಂಸದ ಹ್ಯಾರಿಸ್ ಬೀರಾನ್ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ಕ್ಕೆ ನಡೆಯುವ ಸೈಬರ್ ಜಾಗೃತಿ ವಿಚಾರ ಸಂಕಿರಣವನ್ನು ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್ಪಿ ಟಿ. ಉತ್ತಮದಾಸ್ ನಿರ್ವಹಿಸುವರು. ಮಧ್ಯಾಹ್ನ 2 ಗಂಟೆಗೆ ಮಾರ್ಗದರ್ಶನ ವಿಚಾರ ಸಂಕಿರಣ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೆರವೇರಿಸುವರು. ಕಾಸರಗೋಡು ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಉಪಸ್ಥಿತರಿರುವರು. ನಂತರ ವಿವಿಧ ವಿಚಾರ ಸಂಕಿರಣ ನಡೆಯಲಿದೆ. ಖ್ಯಾತ ಸೈಬರ್ ಜಾಗೃತಿ ತರಬೇತುದಾರ ರಂಗೀಶ್ ಕಡವತ್
ಸೈಬರ್ ಜಾಗೃತಿ ವಿಚಾರ ಸಂಕಿರಣ ನಡೆಸಿಕೊಡುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ಕೇಂದ್ರದ ಮುಖ್ಯಸ್ಥ ಇಬ್ರಾಹಿಂ ಮಿಶಾಬ್ ಚೂರಿ ಉಪಸ್ಥಿತರಿದ್ದರು.




