ಕಾಸರಗೋಡು ನಗರದಲ್ಲಿ ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿ-12ಮಂದಿಗೆ ಗಾಯ
ಕಾಸರಗೋಡು: ನಗರದ ಬ್ಯಾಂಕ್ ರಸ್ತೆಯಲ್ಲಿ ಟೂರಿಸ್ಟ್ ಬಸ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಗಿ 12ಮಂದಿ ಗಾಯಗೊಂಡಿದ್ದಾರೆ. ಕಾಸರಗೋಡು-ಮಧೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ ಚಾಲಕ ಕಮಲಾಕ್ಷ ಎಂಬವರು ಗಂಭೀರಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಠಾಣೆ ಸಮೀಪ ಭಾನುವಾರ ಅಪಘಾತ ನಡೆದಿದೆ.
ಮದುವೆ ದಿಬ್ಬಣ ಕೊಂಡೊಯ್ಯುತ್ತಿದ್ದ ಟೂರಿಸ್ಟ್ ಬಸ್ ಮತ್ತು ಕಾಸರಗೋಡು-ಮಧೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‍ಮಧ್ಯೆ ಅಪಘಾತ ನಡೆದಿದೆ. ಅಪಘಾತದಿಂದ ಖಾಸಗಿ ಬಸ್ ನಜ್ಜುಗುಜ್ಜಾಗಿದ್ದು, ಬಸ್ಸಿನ ಚಾಲಕ ಕಮಲಾಕ್ಷ ಅವರನ್ನು ಅಗ್ನಿಶಾಮಕ ದಳದ ಸಹಾಯದಿಂದ ಹೊರ ತೆಗೆಯಲಾಗಿದೆ.
ಟೂರಿಸ್ಟ್ ಬಸ್ ಚಾಲಕ ವಿದ್ಯಾನಗರದ ಸಫೀರ್, ಮನ್ನಿಪ್ಪಾಡಿ ನಿವಾಸಿ ಸ್ವಪ್ನಾ, ಪಟ್ಲ ನಿವಾಸಿ ಅಬ್ಬಾಸ್, ಮೀಪುಗುರಿ ನಿವಾಸಿ ಸುರೇಶ್, ಉಳಿಯತ್ತಡ್ಕ ನಿವಾಸಿ ಸರಸ್ವತಿ, ಆಲಂಪಡಿ ನಿವಾಸಿ ಅಬ್ದುಲ್ ರಹಮಾನ್ ಸೇರಿದಮತೆ 12ಮಂದಿ ಗಾಯಗೊಂಡಿದ್ದು, ಇವರನ್ನು ನಗರದ ವಿವಿಧ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ದಲ್ಲಿ ಗಾಯ ಗೊಂಡವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಾಗರಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಖಾಸಗಿ ಬಸ್ ಚಾಲಕ ಕಮಲಾಕ್ಷ ಗಂಭೀರ ಗಾಯಗೊಂಡಿದ್ದು, ಟೂರಿಸ್ಟ್ ಬಸ್ ಚಾಲಕ ವಿದ್ಯಾನಗರದ ಸಫೀರ್ (40), ಮನ್ನಿಪ್ಪಾಡಿಯ ಸ್ವಪ್ನಾ (49) , ಅಲಂಪಾಡಿಯ ಮುಸ್ತಫ ( 40) , ಪಟ್ಲದ ಅಬ್ಬಾಸ್ (66), ಅಲಂಪಾಡಿಯ ಅಬ್ದುಲ್ ರಹ್ಮಾನ್ ( 50), ಮೀಪುಗುರಿಯ ಸುರೇಶ್ (49), ಉಳಿಯತ್ತಡ್ಕದ ಸರಸ್ವತಿ (57) ಮೊದಲಾದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.




