ಕಾಸರಗೋಡು: ಮನೆಯೊಳಗೆ ಮಲಗಿ ನಿದ್ರಿಸುತ್ತಿದ್ದ ತಾಯಿಗೆ ಇರಿದು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಉಪ್ಪಳ ಮಣಿಮುಂಡದ ಶೇಕ್‍ಆದಂ ಕೋಟ್ಟೇಜ್ ನಿವಾಸಿ ಅಶ್ರಫ್‍ಖಾನ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ಶಮೀಮಾಭಾನು ಅವರಿಗೆ ಪುತ್ರ ಅಶ್ರಫ್‍ಖಾನ್ ಇರಿದ ಪರಿಣಾಂ ಗಂಭೀರ ಗಾಯಗೊಂಡಿದ್ದು, ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು, ಶಮೀಮಾಭಾನು ನಿದ್ರಿಸುತ್ತಿದ್ದ ಸಂದರ್ಭ ಪುತ್ರ ಇರಿದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಕಲಿಸಿಕೊಂಡಿದ್ದರು.




