ಕುಂಬಳೆ: ತಲಪ್ಪಾಡಿ ಟೋಲ್ ಬೂತ್ ದಾಟಿದ ನಂತರ, ಕೇವಲ 60 ಕಿ.ಮೀ ದೂರದಲ್ಲಿ ಟೋಲ್ ಬೂತ್ ಲಭ್ಯವಿರಬೇಕು.ತಲಪ್ಪಾಡಿಯಿಂದ 60ಕಿ.ಮೀ ದೂರದ ಚಾಲಿಂಗಲ್‍ನಲ್ಲಿ ಟೋಲ್ ಬೂತ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲೇ ಟೋಲ್ ಬೂತ್ ಇರಲೇಬೇಕು. ಆದರೆ ಇದರ ಮಧ್ಯೆ ಕುಂಬಳೆಯಲ್ಲಿ ಮತ್ತೊಂದು ಟೋಲ್ ಬೂತ್ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದ್ದು ಇದು ಅನ್ಯಾಯವಾಗಿದೆ. ಈ ಕ್ರಮದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಿಂದೆ ಸರಿಯಬೇಕು, ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಸರಗೋಡು ತಾಲೂಕು ಖಾಸಗೀ ಬಸ್ ಮಾಲಕರ ಸಂಘಟನೆ ಅಧಿಕೃತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




