ಸಮರಸ ಚಿತ್ರಸುದ್ದಿ: ಕಾಸರಗೋಡು 'ನನ್ನ ಕೇರಳಂ' ಪ್ರದರ್ಶನ ಮೇಳದ ಐದನೇ ದಿನದಂದು, ಟಿ. ಪಿ. ಸುಕುಮಾರನ್ ಬರೆದು ಟಿ. ಪವಿತ್ರನ್ ನಿರ್ದೇಶಿಸಿದ, ಯುವ ಕಲಾ ಸಾಹಿತ್ಯ ಕಣ್ಣೂರು ಪ್ರದರ್ಶಿಸಿದ 'ಆಯಂಚೇರಿ ವಲ್ಯ ಲಕ್ಷ್ಮಣನ್' ನಾಟಕವು ಪ್ರೇಕ್ಷಕರಿಂದ ಭಾರೀ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ವೇದಿಕೆಯಲ್ಲಿ ಪ್ರದರ್ಶಿಸಲಾದ ನಾಟಕವು ಹಿಂದಿನ ಕಾಲದ ನಾಟಕಗಳನ್ನು ನೆನಪಿಸುತ್ತಿತ್ತು. ವೆಲ್ಲರಿ ಎಂದು ಕರೆಯಲ್ಪಡುವ ಇಂತಹ ನಾಟಕಗಳು ತರಕಾರಿಗಳ ಸುಗ್ಗಿಯನ್ನು ಆಚರಿಸಲು ಮಲಬಾರ್‍ನ ಹೊಲಗಳಲ್ಲಿಯುವಕರು ಒಟ್ಟಾಗಿ ರಚಿಸಿದ ನಾಟಕಗಳಾಗಿದ್ದವು.
ಬಹಳ ಸಮಯದ ನಂತರ ಅದು ಮತ್ತೆ ವೇದಿಕೆಗೆ ಬಂದಾಗ, ಪ್ರೇಕ್ಷಕರಿಗೆ ಅದು ಹೊಸ ಅನುಭವವಾಗಿತ್ತು.





