ಗಾಜಾ ಪಟ್ಟಿಯಲ್ಲಿ ಹಿಂಸೆಗೆ ಕೊನೆಯೇ ಇಲ್ಲ ಎನ್ನುವಂತೆ ಆಗಿದ್ದು, ಇಸ್ರೇಲ್ ಸೇನೆಯಿಂದ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಯುತ್ತಿದೆ. ಒಂದು ಕಡೆ ಇಸ್ರೇಲ್ ಕೊಡುತ್ತಿರುವ ಈ ಏಟಿಗೆ ಗಾಜಾ ಪಟ್ಟಿ ಅಕ್ಷರಶಃ ನಲುಗಿ ಹೋಗಿದ್ದರೆ, ಇನ್ನೊಂದು ಕಡೆ ಹಮಾಸ್ ಶರಣಾಗುವ ಮಾತು ಹೇಳುತ್ತಿದೆ.
ಹೀಗಿದ್ದರೂ ಗಾಜಾ ಪಟ್ಟಿಯಲ್ಲಿ ಯುದ್ಧ ಮಾತ್ರ ನಿಲ್ಲುತ್ತಿಲ್ಲ, ಪರಿಣಾಮ ಬಡಿದಾಟ ಇನ್ನಷ್ಟು ಹೆಚ್ಚಾಗುತ್ತಿದೆ. ಇಂದು ಕೂಡ ಅದೇ ರೀತಿ ಹಿಂಸಾಚಾರ ನಡೆದು ಹೋದ ಆರೋಪ ಕೇಳಿ ಬಂದಿದೆ.
ಮಧ್ಯಪ್ರಾಚ್ಯ ಭಾಗದಲ್ಲಿ ಬರುವ ಗಾಜಾ ಪಟ್ಟಿ ಜಗತ್ತಿನ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎನ್ನಬಹುದು. ಯಾಕಂದ್ರೆ ಗಾಜಾ ಪಟ್ಟಿ ಭಾಗದಲ್ಲಿ ಪದೇ ಪದೇ ಹಿಂಸಾಚಾರ ನಡೆಯುತ್ತಾ, ಇಸ್ರೇಲ್ & ಗಾಜಾ ನಡುವೆ ತಿಕ್ಕಾಟ ಆಗುತ್ತಿತ್ತು. ಆದರೆ ಯಾವಾಗ ಹಮಾಸ್ ನೇರ ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ಆರಂಭ ಮಾಡಿತ್ತೋ ಅಲ್ಲಿಂದ ಪರಿಸ್ಥಿತಿ ಬದಲಾಗಿತ್ತು. 2023ರ ಅಕ್ಟೋಬರ್ ತಿಂಗಳಿಂದ ಶುರುವಾಗಿದ್ದ ಭಾರಿ ದೊಡ್ಡ ಪ್ರಮಾಣದ ದಾಳಿ ಇಂದಿಗೂ ನಿಂತಿಲ್ಲ. ಇಂತಹ ಸಂದರ್ಭದಲ್ಲೇ ಇಂದು ಕೂಡ ಮತ್ತೆ ಡೆಡ್ಲಿ ಅಟ್ಯಾಕ್ ಆಗಿದೆ.
ಗಾಜಾ ಮೇಲೆ ಡೆಡ್ಲಿ ಅಟ್ಯಾಕ್
ಹೌದು, ಇಸ್ರೇಲ್ ಸೇನೆ ಗಾಜಾ ಪಟ್ಟಿಯ ಮೇಲೆ ತನ್ನ ವಾಯುದಾಳಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ನಲುಗಿ ಹೋಗಿರುವ ಗಾಜಾ ಮತ್ತೆ ರಕ್ತಪಾತಕ್ಕೆ ಸಾಕ್ಷಿಯಾಗಿದೆ. ಇಂದು ನಡೆದ ಇಸ್ರೇಲ್ ದಾಳಿಯಲ್ಲಿ ಬರೋಬ್ಬರಿ 14 ಜನ ಬಲಿಯಾಗಿದ್ದಾರೆ ಎಂಬ ಆರೋಪವನ್ನ ಇದೀಗ ಮಾಡಲಾಗಿದೆ. ಮತ್ತೊಂದು ಕಡೆ ಮೊದಲೇ ಸೂಕ್ಷ್ಮ ಪ್ರದೇಶವಾಗಿದ್ದ ಗಾಜಾ ಪಟ್ಟಿಯಲ್ಲಿ ಈ ದಾಳಿ ಬಳಿಕ ಇನ್ನಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ.
ರಷ್ಯಾ & ಉಕ್ರೇನ್ ಜೊತೆಗೆ ಇಸ್ರೇಲ್ & ಗಾಜಾ!
ಇಸ್ರೇಲ್ ದಾಳಿ ಪರಿಣಾಮ ಗಾಜಾ ಪಟ್ಟಿ ರಕ್ತಪಾತವಾಗಿದೆ, ಎಂಬ ಆರೋಪ ಇದೆ. ಮತ್ತೊಂದು ಕಡೆ ಅತಿ ಹೆಚ್ಚು ಮಕ್ಕಳು ಮಹಿಳೆಯರು ಮೃತಪಟ್ಟು ಪರಿಸ್ಥಿತಿ ಗಂಭೀರವಾಗಿದೆ. ಮಧ್ಯಪ್ರಾಚ್ಯ ದೇಶಗಳು ಇದನ್ನ ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಅಮೆರಿಕಗೆ ಹೊಸ ತಲೆನೋವು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್ & ಹಮಾಸ್ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಚಿಂತನೆ ಕೂಡ ನಡೆದಿದೆ. ಡೊನಾಲ್ಡ್ ಟ್ರಂಪ್ ಎದುರು ಈಗ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಬೇಕಾದ ಸವಾಲಿನ ಜೊತೆಗೆ ಇಸ್ರೇಲ್ & ಗಾಜಾ ಪಟ್ಟಿ ಯುದ್ಧವೂ ಸುತ್ತಿಕೊಂಡಿದೆ.




