HEALTH TIPS

ಚಾಟ್‌ಜಿಪಿಟಿ ಜಗತ್ತಿನ ನಂಬರ್‌ 1 ಡೌನ್‌ಲೋಡ್‌ ಆಯಪ್: ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಿಂದಿಕ್ಕಿದ ಎಐ ದಿಗ್ಗಜ!

ಟೆಕ್ ಜಗತ್ತಿನಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಬೆಳೆಯುತ್ತಿರುವುದು ಸಾಮಾನ್ಯ. ಆದರೆ ಈ ಬಾರಿ, ಒಂದು ಎಐ ಆಧಾರಿತ ಚಾಟ್‌ಬಾಟ್ ಅಪ್ಲಿಕೇಶನ್ ಮಾಡಿದ ದಾಖಲೆಯು ತಂತ್ರಜ್ಞಾನ ಪ್ರಿಯರ ಗಮನವನ್ನು ಸೆಳೆಯುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ, 'ಚಾಟ್‌ಜಿಪಿಟಿ'(ChatGPT) ಆಯಪ್ ಇನ್‌ಸ್ಟಾಗ್ರಾಂ ಮತ್ತು ಟಿಕ್‌ಟಾಕ್‌ಅನ್ನು ಮೀರಿಸಿ ಜಗತ್ತಿನಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆಯಪ್ ಎಂಬ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.ಸಾಮಾನ್ಯವಾಗಿ ಇನ್‌ಸ್ಟಾಗ್ರಾಂ ಪ್ರತಿ ತಿಂಗಳು ಅತೀ ಹೆಚ್ಚು ಡೌನ್‌ಲೋಡ್ ಆಗುವ ಆಯಪ್‌ ಆಗಿರುತ್ತಿತ್ತು.

ಆದರೆ ಈ ಬಾರಿ ಅಚ್ಚರಿಯೇನಂದರೆ, ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್‌ ಅನ್ನು ಹಿಂದಿಕ್ಕಿ, 'ಚಾಟ್‌ಜಿಪಿಟಿ' (ChatGPT) ಆಯಪ್‌ ಮಾರ್ಚ್ ತಿಂಗಳಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚು ಡೌನ್‌ಲೋಡ್ ಆದ ಆಯಪ್‌ ಎಂಬ ದಾಖಲೆ ಸಾಧಿಸಿದೆ.ಡೇಟಾ ಅನಾಲಿಟಿಕ್ಸ್‌ ಸಂಸ್ಥೆಯ ವರದಿಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ಚಾಟ್‌ಜಿಪಿಟಿ ಮೊಬೈಲ್ ಆಯಪ್ ಅನ್ನು ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವೆಂದರೆ, ಈ ಆಯಪ್‌ನಲ್ಲಿ ಜನರು ಪ್ರಶ್ನೆ ಕೇಳಬಹುದಾದ, ವಿಷಯ ತಿಳಿದುಕೊಳ್ಳಬಹುದಾದ, ಸಹಜ ಸಂಭಾಷಣೆಯ ಮಾದರಿಯ ಎಐ(AI) ವ್ಯವಸ್ಥೆ ಇದೆ. ಇದು ಎಲ್ಲ ವರ್ಗದ ಬಳಕೆದಾರರಲ್ಲಿ ವಿಶ್ವಾಸ ಪಡೆದುಕೊಂಡಿದೆ.ಈ ಸಾಧನೆಯಿಂದ, ಜನರು ಈಗ ಮಾಧ್ಯಮ ಆಯಪ್‌ಗಳಿಗಿಂತ ಹೆಚ್ಚು ಜ್ಞಾನಪ್ರದ, ಉಪಯುಕ್ತವಾದ ಎಐ ಆಧಾರಿತ ಸೇವೆಗಳತ್ತ ತಿರುಗುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.

ಆಯಪ್‌ ಫಿಗರ್ಸ್ (App Figures) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಚಾಟ್‌ಜಿಪಿಟಿ 2024ರ ಮಾರ್ಚ್ ತಿಂಗಳಲ್ಲಿ ವಿಶ್ವದಾದ್ಯಾಂತ 46 ಮಿಲಿಯನ್ (4.6 ಕೋಟಿ) ಡೌನ್‌ಲೋಡ್‌ಗಳನ್ನು ದಾಖಲಿಸಿದೆ. ಜಿಬ್ಲಿ ಶೈಲಿಯ ಸ್ಟುಡಿಯೋ ಆರ್ಟ್‌ ಹಾಗೂ ಕ್ರಿಯೇಟಿವ್ ಕಂಟೆಂಟ್‌ಗಳ ಪ್ರಚಂಡ ಜನಪ್ರಿಯತೆಯಿಂದಾಗಿ ಈ ಬಾರಿ ಚಾಟ್‌ಜಿಪಿಟಿಗೆ ಭಾರೀ ಪ್ರತಿಕ್ರಿಯೆ ದೊರೆತಿದೆ. ಈ ಪೈಕಿ 1.3 ಕೋಟಿ ಡೌನ್‌ಲೋಡ್‌ಗಳು ಆಪಲ್‌ನ ಐಒಎಸ್‌ (iOS) ಮೂಲಕವಾಗಿದ್ದರೆ, 3.3 ಕೋಟಿ ಡೌನ್‌ಲೋಡ್‌ಗಳು ಗೂಗಲ್‌ನ ಆಂಡ್ರಾಯ್ಡ್‌ ಮೂಲಕ ನಡೆದಿವೆ.ಇದೇ ಅವಧಿಯಲ್ಲಿ ಇನ್‌ಸ್ಟಾಗ್ರಾಮ್‌ ಕೂಡ 4.6 ಕೋಟಿ ಡೌನ್‌ಲೋಡ್‌ಗಳನ್ನು ದಾಖಲಿಸಿದ್ದು, ಇದರಲ್ಲಿ ಐಒಎಸ್‌ನಲ್ಲಿ 50 ಲಕ್ಷ ಮತ್ತು ಆಂಡ್ರಾಯ್ಡ್‌ನಲ್ಲಿ 4.1 ಕೋಟಿ ಡೌನ್‌ಲೋಡ್‌ಗಳು ನಡೆದಿವೆ. ಆದರೆ ಚಾಟ್‌ಜಿಪಿಟಿಯ ಡೌನ್‌ಲೋಡ್‌ ಸಂಖ್ಯೆ ಸ್ವಲ್ಪ ಹೆಚ್ಚು ಇರುವ ಕಾರಣ, ಅದು ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.ಅಂತೆಯೇ, ಟಿಕ್‌ಟಾಕ್‌ ಆಪ್‌ 4.5 ಕೋಟಿ ಡೌನ್‌ಲೋಡ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಪಡಬೇಕಾಯಿತು. ಈ ಪೈಕಿ 80 ಲಕ್ಷ ಡೌನ್‌ಲೋಡ್‌ಗಳು ಐಒಎಸ್‌ ಮೂಲಕ ಮತ್ತು 3.7 ಕೋಟಿ ಡೌನ್‌ಲೋಡ್‌ಗಳು ಆಂಡ್ರಾಯ್ಡ್‌ ಮೂಲಕ ನಡೆದಿವೆ.ಚಾಟ್‌ಜಿಪಿಟಿ ಶೈಕ್ಷಣಿಕ, ಉದ್ಯೋಗ, ಲೇಖನ ಬರವಣಿಗೆ, ಸಂಕೀರ್ಣ ಮಾಹಿತಿಯ ಅನಾಲಿಸಿಸ್, ಕೋಡ್ ಬರವಣಿಗೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries