ಪ್ರಸಿದ್ಧ ಇನ್‌ಸ್ಟಾಗ್ರಾಮ್ ಆಫ್ (Instagram App) ರೀಲ್ಸ್, ಫೋಟೋ ಮತ್ತು ವಿಡಿಯೋ ಹಂಚಿಕೆ ಅಪ್ಲಿಕೇಶನ್‌ನ ಅತ್ಯಂತ ಜನಪ್ರಿಯ ವೈಶಿಷ್ಟ್ಯವಾಗಿದೆ. ಟಿಕ್ ಟಾಕ್ ನಿಷೇಧವಾದ ಬಳಿಕ ಭಾರತದಲ್ಲಿ ಇದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿತು. ಬಳಕೆದಾರರು ಇನ್‌ಸ್ಟಾದಲ್ಲಿ ಗಂಟೆಗಟ್ಟಲೆ ರೀಲ್‌ಗಳನ್ನು ವೀಕ್ಷಿಸುತ್ತಾರೆ.
ಕೆಲವೊಮ್ಮೆ ನೀವು ರೀಲ್ ಅನ್ನು ಇಷ್ಟಪಟ್ಟಾಗ, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸೇವ್ ಮಾಡುತ್ತೀರಿ ಮತ್ತು ಮೆಸೇಜ್ ಮೂಲಕ ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತೀರಿ. ಆದಾಗ್ಯೂ, ಈಗ ಬಳಕೆದಾರರು ವಾಟ್ಸ್‌ಆಯಪ್ ಸ್ಟೇಟಸ್ನಲ್ಲಿಯೂ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಹಂಚಿಕೊಳ್ಳಬಹುದು.
ಈ ಹಿಂದೆ, ಇನ್‌ಸ್ಟಾ ರೀಲ್‌ಗಳು ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಲಿಂಕ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದವು, ಆದರೆ ಈಗ ಅವುಗಳ ವಿಡಿಯೋ ಕೂಡ ಕಾಣಿಸಿಕೊಳ್ಳುತ್ತದೆ. ಜೊತೆಗೆ ಆಡಿಯೋ ಕೂಡ ಕಣ್ಮರೆಯಾಗುವುದಿಲ್ಲ. ಈ ಮೂಲಕ ಮೆಟಾ ಅನೇಕ ಬಳಕೆದಾರರ ಸಮಸ್ಯೆಯನ್ನು ಬಗೆಹರಿಸಿದೆ. ಈಗ ಬಳಕೆದಾರರು ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
- ಮೊದಲು, ನಿಮ್ಮ ವಾಟ್ಸ್‌ಆಯಪ್ ಮತ್ತು ಇನ್‌ಸ್ಟಾಗ್ರಾಮ್ ಅಪ್ಲಿಕೇಷನ್ ಅನ್ನು ಅಪ್ಡೇಟ್ ಮಾಡಿ. ಬಳಿಕ ಇನ್‌ಸ್ಟಾಗ್ರಾಮ್ ತೆರೆಯಿರಿ.
- ಇದರ ನಂತರ, ಇನ್‌ಸ್ಟಾಗ್ರಾಮ್ ರೀಲ್ಸ್ ತೆರೆಯಿರಿ.
- ನಿಮ್ಮ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ನೀವು ಹಂಚಿಕೊಳ್ಳಲು ಬಯಸುವ ಯಾವುದೇ ರೀಲ್‌ಗಳ ಕೆಳಗೆ ಗೋಚರಿಸುವ ಶೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ರೀಲ್‌ಗಳ ಕೆಳಗೆ ಎರಡು ವಾಟ್ಸ್‌ಆಯಪ್ ಆಯ್ಕೆಗಳನ್ನು ಒಳಗೊಂಡಂತೆ ಹಲವು ಆಯ್ಕೆಗಳನ್ನು ನೋಡುತ್ತೀರಿ. ಒಂದು ಆಯ್ಕೆಯಲ್ಲಿ ವಾಟ್ಸ್‌ಆಯಪ್ ಲಭ್ಯವಿರುತ್ತದೆ ಮತ್ತು ಇನ್ನೊಂದು ಆಯ್ಕೆಯಲ್ಲಿ ವಾಟ್ಸ್‌ಆಯಪ್ ಸ್ಟೇಟಸ್ ಲಭ್ಯವಿರುತ್ತದೆ. ನೀವು ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಹಂಚಿಕೊಳ್ಳಲು ಬಯಸಿದರೆ, ವಾಟ್ಸ್ಆಯಪ್ಸ್ಟೇಟಸ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಆಡಿಯೋ ಹೊಂದಿರುವ ಇನ್‌ಸ್ಟಾಗ್ರಾಮ್ ರೀಲ್ ನಿಮ್ಮ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ತಮ್ಮದೇ ಆದ ರೀಲ್‌ಗಳನ್ನು ರಚಿಸುವ ಜನರಿಗೆ ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿರುತ್ತದೆ. ಈ ರೀತಿಯಾಗಿ, ಅವರು ತಮ್ಮ ರೀಲ್‌ಗಳನ್ನು ಗರಿಷ್ಠ ಮಟ್ಟದಲ್ಲಿ ತಲುಪಲು ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ರೀಲ್‌ಗಳನ್ನು ಹಂಚಿಕೊಳ್ಳಬಹುದು. ಇಲ್ಲಿಯವರೆಗೆ ರೀಲ್‌ಗಳನ್ನು ನೇರವಾಗಿ ವಾಟ್ಸ್‌ಆಯಪ್ ಸ್ಟೇಟಸ್‌ಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಹೊಸ ವೈಶಿಷ್ಟ್ಯದ ನಂತರ, ಈಗ ಅವರು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವಾಟ್ಸ್‌ಆಯಪ್ ಸ್ಟೇಟಸ್‌ಗೆ ಸುಲಭವಾಗಿ ಆಡಿಯೋ ಜೊತೆಗೆನೇ ಹಾಕಲು ಸಾಧ್ಯವಾಗುತ್ತದೆ.
ವಾಟ್ಸ್ಆಯಪ್ನಲ್ಲಿ ಸದ್ಯದಲ್ಲೇ ಮತ್ತೊಂದು ಹೊಸ ಅಪ್ಡೇಟ್:
ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್‌ಆಯಪ್ ನಲ್ಲಿ ಮತ್ತೊಂದು ದೊಡ್ಡ ನವೀಕರಣ ಸದ್ಯದಲ್ಲೇ ಬರಲಿದೆ. ಈ ಹೊಸ ಅಪ್‌ಡೇಟ್ ಬಂದ ನಂತರ, ನಿಮ್ಮ ಅನುಮತಿಯಿಲ್ಲದೆ ಯಾರೂ ನೀವು ಕಳುಹಿಸಿದ ಫೋಟೋ ಅಥವಾ ವಿಡಿಯೋವನ್ನು ಅವರ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗುವುದಿಲ್ಲ. wabetainfo ಪ್ರಕಾರ, ಇದು ಹೊಸ iOS ಅಪ್‌ಡೇಟ್ ಆಗಿದ್ದು, ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಕಾರ್ಯಕ್ರಮದ ಅಡಿಯಲ್ಲಿ ತರಲಾಗಿದೆ. ಇದು iOS ನಲ್ಲಿ ವಾಟ್ಸ್‌ಆಯಪ್ ನವೀಕರಣದ 25.10.10.70 ಆವೃತ್ತಿಯಾಗಿದೆ.




