ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ದೃಢಕಲಶ ಉತ್ಸವ ಎಡನೀರು ಮಠಾಧೀಶರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯೊಂದಿಗೆ ಕ್ಷೇತ್ರದ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಎಪ್ರಿಲ್ 22 ಮಂಗಳವಾರ ಜರಗಲಿರುವುದು.
ಎಪ್ರಿಲ್ 21ರಂದು ಸಂಜೆ 5.30ಕ್ಕೆ ಬ್ರಹ್ಮಶ್ರೀ ಗಣೇಶ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 6ರಿಂದ ಶುದ್ದಿ, ವಾಸ್ತು, ರಾಕ್ಷೋಘ್ನ, ವಾಸ್ತು ಬಲಿ, 7.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ, 22 ರಂದು ಬೆಳಗ್ಗೆ 6ರಿಂದ ಗಣಪತಿ ಹವನ, ದೃಢಕಲಶ ಪೂಜೆ 8:30 ಕ್ಕೆ ಎಡನೀರು ಮಠಾಧೀಶರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ ಪೂರ್ಣಕುಂಭ ಸ್ವಾಗತ, 9ಕ್ಕೆ ದೃಢಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಸಂಜೆ 5:30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 7 ಕ್ಕೆ ಮಹಾ ಮಂಗಳಾರತಿ 7.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ನಡೆಯಲಿದೆ.
ದೃಢಕಲಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರಪಾಣಿ ನರಸಿಂಹ ಭಟ್ ಕಾರ್ಮಾರು, ಆಡಳಿತ ಮುಕ್ತೇಸರರಾದ ರಾಧಾಕೃಷ್ಣ ರೈ ಕಾರ್ಮಾರು, ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಸುಂದರ ಶೆಟ್ಟಿ ಕೊಲ್ಲಂಗಾನ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಕೋಶಾಧಿಕಾರಿ ರಂಜಿತ್‍ಯಾದವ್, ಸೇವಾ ಸಮಿತಿ ಕಾರ್ಯದರ್ಶಿ ರಾಮ ಕಾರ್ಮಾರು, ಪುರುಷೋತ್ತಮ ಕಾರ್ಮಾರು, ಕೃಷ್ಣಕುಮಾರ್ ಚುಕ್ಕಿನಡ್ಕ, ಶಶಿಕಾಂತ್ ಶೆಟ್ಟಿ ಕಾರ್ಮಾರು, ಪುನೀತ್ ಕಾರ್ಮಾರು ಉಪಸ್ಥಿತರಿದ್ದರು.
......




.jpg)
