ಕುಂಬಳೆ. ಅರಿಕ್ಕಾಡಿ ಕಡವತ್ ಮಕಾಮ್‍ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶಹೀದ್ ಅರಬಿ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಸಮಾರಂಭ ಮತ್ತು ಸಂಬಂಧಿತ ಧಾರ್ಮಿಕ ಪ್ರವಚನ ಸರಣಿಯನ್ನು ಏಪ್ರಿಲ್ 10 ರಿಂದ 20 ರವರೆಗೆ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖ ವಿದ್ವಾಂಸರು, ಉಮರ್‍ಗಳು ಮತ್ತು ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಏಪ್ರಿಲ್ 10 ರ ಗುರುವಾರ ಬೆಳಿಗ್ಗೆ 10ಕ್ಕೆ ಉದ್ಯಾವರ ಸೈಯದ್ ಅತ್ತಾವುಲ್ಲಾ ತಂಙಳ್ ಧ್ವಜಾರೋಹಣಗೈದು ಚಾಲನೆ ನೀಡುವರು. ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅವರು ರಾತ್ರಿ 8.30ಕ್ಕೆ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸುವರು. ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಅಬ್ದುಲ್ ಮಜೀದ್ ಅಮಾನಿ ಉಪನ್ಯಾಸ ನೀಡಲಿದ್ದು, ಕುಂಬಳೆ ಖತೀಬ್ ಉಮ್ಮರ್ ಹುದವಿ ಪೂಲಪದವು ಮುಖ್ಯ ಭಾಷಣ ಮಾಡುವರು. ಶಾಸಕ ಎಕೆಎಂ ಅಶ್ರಫ್ ಶಾಸಕರು ಮತ್ತು ಕುಂಬಳೆ ಪೋಲೀಸ್ ಇನ್ಸ್‍ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಮಾತನಾಡಲಿದ್ದಾರೆ.
11 ರಂದು ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಪ್ರಾರ್ಥನೆ ನಡೆಸಲಿದ್ದಾರೆ. ಲುಕ್ಮಾನುಲ್ ಹಕೀಂ ಸಖಾಫಿ ಪ್ರವಚನ ನೀಡಲಿದ್ದಾರೆ. ಅಬ್ದುಲ್ ರಹಿಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಪ್ರಾರ್ಥನೆ ನಿರ್ವಹಿಸುವರು. ಉದುಮ ಶಾಸಕ ಸಿ.ಎಚ್. ಕುಂಞಂಬು ಮುಖ್ಯ ಅತಿಥಿಗಳಾಗಿ ಮಾತನಾಡುವರು. 12 ರಂದು ಸೈಯದ್ ಶಮೀಮ್ ತಂಙಳ್ ಕುಂಬೋಲ್ ಪ್ರಾರ್ಥನೆ ನೆರವೇರಿಸುವರು. ಸಿಮ್ಸಾರುಲ್ ಹಕ್ ಹುದವಿ ಮುಖ್ಯ ಭಾಷಣ ಮಾಡುವರು. 13 ರಂದು ಸಯ್ಯದ್ ಶಿಹಾಬುದ್ದೀನ್ ಅಲ್-ಹೈದ್ರೂಸಿ (ಕಿಲ್ಲೂರು ತಂಙಳ್) ಪ್ರಾರ್ಥನೆ ನಡೆಸಲಿದ್ದು, ಪೆರೋಡೆ ಅಬ್ದುಲ್ ರಹಮಾನ್ ಸಖಾಫಿ ಮುಖ್ಯ ಭಾಷಣ ಮಾಡುವರು. 14 ರಂದು ಸೈಯದ್ ಜೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಪ್ರಾರ್ಥನೆ ಸಲ್ಲಿಸಲಿದ್ದು, ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪದ್ದನಾಪುರಂ ಮುಖ್ಯ ಭಾಷಣ ಮಾಡುವರು. 15 ರಂದು ಸೈಯದ್ ಜೈನುದ್ದೀನ್ ಅಲ್-ಬುಖಾರಿ ಕುರಿಕುಝಿ ತಂಙಳ್ ಪ್ರಾರ್ಥನೆ ನಡೆಸಲಿದ್ದು, ಹನೀಫ್ ನಿಜಾಮಿ ಮೊಗ್ರಾಲ್ ಮುಖ್ಯ ಭಾಷಣ ಮಾಡುವರು. 16 ರಂದು ಸೈಯದ್ ಸಫ್ವಾನ್ ತಂಙಳ್ ಏಲಿಮಲೆ ಪ್ರಾರ್ಥನೆ ನಡೆಸಿಕೊಡಲಿದ್ದಾರೆ. ವಲಿಯುದ್ದೀನ್ ಫೈಝಿ ವಝಕ್ಕಾಡ್ ನೂರ್ ಅಜ್ಮೀರ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಭಾಗವಹಿಸುವರು. 17ರಂದು ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕನ್ನವಂ ಪ್ರಾರ್ಥನೆ ನಡೆಸಲಿದ್ದಾರೆ. ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮದನಿಯಂ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. 18 ರಂದು ಸೈಯದ್ ಮುಖ್ತಾರ್ ತಂಙಳ್ ಕುಂಬೋಲ್ ಪ್ರಾರ್ಥನೆ ನಿರ್ವಹಿಸುವರು. ನಜತುಲ್ ಇಸ್ಲಾಂ ಸಂಘಂ ಸ್ಟ್ರೀಟ್ ತಂಡ ಇμÉ್ಖ ರಸೂಲ್ ಸದಸ್ ಗೆ ನೇತೃತ್ವ ನೀಡಲಿದೆ. ಬೆಂಗಳೂರಿನ ಮುಹಿನುದ್ದೀನ್ ಅಲ್ ಖಾದಿರಿ ಅವರಿಂದ ಕವ್ವಾಲಿ ನಡೆಯಲಿದೆ. ಸೈಯದ್ ಶಿಹಾಬುದ್ದೀನ್ ಅಲ್-ಅಹ್ದಲ್ (ಮುತ್ತನ್ನೂರ್ ತಂಙಳ್) ಪ್ರಾರ್ಥನೆ ನಡೆಸುವರು. 19 ರಂದು ನಡೆಯುವ ಸಮಾರೋಪ ಸಮಾರಂಭವನ್ನು ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಪಾಣಕ್ಕಾಡ್ ಸೈಯದ್ ಬಶೀರ್ ಅಲಿ ಶಿಹಾಬ್ ತಂಙಳ್ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನೌಫಲ್ ಸಖಾಫಿ ಕಳಸ ಉಪನ್ಯಾಸ ನೀಡಲಿದ್ದಾರೆ. ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಬುಖಾರಿ ಸಮಾರೋಪ ಪ್ರಾರ್ಥನೆ ನಡೆಸಲಿದ್ದಾರೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದರು..
ಪತ್ರಿಕಾಗೋಷ್ಠಿಯಲ್ಲಿ ಖತೀಬ್ ಅಬ್ದುಲ್ ಮಜೀದ್ ಅಮಾನಿ, ಜಮಾಅತ್ ಅಧ್ಯಕ್ಷ ಬಿ.ಮುಹಮ್ಮದ್ ಕುಂಞÂ ಹಾಜಿ, ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಕುಂಞ ಹಾಜಿ, ಉಪಾಧ್ಯಕ್ಷ ಅಬ್ದುಲ್ ಖಾದರ್, ಉರೂಝ್ ಸಮಿತಿ ಅಧ್ಯಕ್ಷ ಎಫ್.ಎಂ. ಮುಹಮ್ಮದ್ ಕುಂಕುಂಞ, ಸಂಚಾಲಕ ಖಾತಿಮ್ ಎ.ಕೆ., ಮತ್ತು ಖಜಾಂಚಿ ಮುಹಮ್ಮದ್ ಕುಂಞÂ್ಞ ಎಂ.ಕೆ. ಉಪಸ್ಥಿತರಿದ್ದರು.





