ಮಧೂರು: ಕುಂಬಳೆ ಸೀಮೆಯ ಪ್ರಧಾನ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಸತತ 12 ದಿನಗಳ ಕಾಲ ನಡೆದ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಸಮಾರೋಪ ಸೋಮವಾರ ನಡೆಯಿತು.
ಈ ಸಂದರ್ಭ ನಡೆದ ಮಹಾ ಮಂತ್ರಾಕ್ಷತೆ ಸಭೆಯಲ್ಲಿ ಮಾತನಾಡಿದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು, ಹಲವು ಸವಾಲುಗಳ ನಡುವೆಯೂ ಉತ್ಸವಗಳು ಯಶಸ್ವಿಯಾಗಿ ನಡೆದು ಇತಿಹಾಸ ನಿರ್ಮಿಸಿದೆ. ಧುಮಿಕಿ ಬಂದ ಗಂಗೆಯನ್ನು ತನ್ನ ಜಟೆಯಲ್ಲಿ ಬಂಧಿಸಿ ಬಳಿಕ ಸಾವಕಾಶವಾಗಿ ಹರಿಯ ಬಿಟ್ಟು ಭೂಮಿಯ ಜನರು ಕೃತಾರ್ಥರಾದಂತೆ ಎಲ್ಲಾ ಗೊಂದಲಗಳನ್ನೂ ಕೊನೆಗೊಳಿಸಿ ಇಲ್ಲಿಯ ಎಲ್ಲಾ ಕಾರ್ಯಕ್ರಮಗಳೂ ಸುಂದೆವಾಗಿ ಕೊನೆಗೊಂಡಿದೆ. ನಮ್ಮೆಲ್ಲರ ಎಲ್ಲ್ಲಾ ಮನೋಕಾಮನೆಗಳನ್ನು ಮಹಾಗಣಪತಿ ಸಹಿತ ಮದನಂತೇಶ್ವರ ಪೂರೈಸಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಸಹಿತ ಋತ್ವಜರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಮಹಾ ಮಂತ್ರಾಕ್ಷತೆ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಸಹಿತ ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.




.jpg)
.jpg)
