ತಿರುವನಂತಪುರಂ: ರಾಜ್ಯ ಸರ್ಕಾರದ ಮಾದಕ ದ್ರವ್ಯ ವಿರೋಧಿ ಅಭಿಯಾನದ ಭಾಗವಾಗಿ ಮತ್ತು ಮಕ್ಕಳ ಶೈಕ್ಷಣಿಕೇತರ ಕೌಶಲ್ಯಗಳನ್ನು ಪೋಷಿಸಲು, ಹೊಸ ಶೈಕ್ಷಣಿಕ ವರ್ಷದಿಂದ ಶಾಲಾ ವಿದ್ಯಾರ್ಥಿಗಳಿಗೆ ಜುಂಬಾ ನೃತ್ಯ ತರಬೇತಿಯನ್ನು ನೀಡಲಾಗುವುದು.
ಇದರ ಅಧಿಕೃತ ಉದ್ಘಾಟನೆಯನ್ನು ಏಪ್ರಿಲ್ 30 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಲಿದ್ದಾರೆ. ಏಪ್ರಿಲ್ 30 ರಂದು ತಿರುವನಂತಪುರದ 15 ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳು ಚಂದ್ರಶೇಖರನ್ ನಾಯರ್ ಕ್ರೀಡಾಂಗಣದಲ್ಲಿ ಜುಂಬಾ ನೃತ್ಯ ಪ್ರದರ್ಶಿಸಲಿದ್ದಾರೆ. ಇದಕ್ಕೂ ಮುನ್ನ ನಡೆದ ತರಬೇತಿಯನ್ನು ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಮೌಲ್ಯಮಾಪನ ಮಾಡಿದರು.
ಸರ್ಕಾರದ ಮಾದಕ ದ್ರವ್ಯ ವಿರೋಧಿ ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳಿಗೆ ಜುಂಬಾ ನೃತ್ಯವನ್ನು ಕಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ. ಇದನ್ನು ಕಲಿಯಲು ಆಸಕ್ತಿ ಹೊಂದಿರುವ ಮಕ್ಕಳಿಗೆ ಕೇರಳದ ಎಲ್ಲಾ ಶಾಲೆಗಳಲ್ಲಿ ತರಗತಿಗಳನ್ನು ನೀಡಲಾಗುವುದು. ಜುಂಬಾ ಮಾತ್ರವಲ್ಲದೆ, ಮಕ್ಕಳು ಆಸಕ್ತಿ ಹೊಂದಿರುವ ಕ್ರೀಡೆಗಳಾದ ಯೋಗವನ್ನೂ ಕಲಿಸಲು ನಿರ್ಧರಿಸಲಾಗಿದೆ.
ಶಾಲೆಗಳಲ್ಲಿ ಕ್ರೀಡೆಗಳಿಗೆ ಮೀಸಲಿಟ್ಟ ಸಮಯದಲ್ಲಿ ಇತರ ವಿಷಯಗಳನ್ನು ಕಲಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿರುವರು.





