ಮುಳ್ಳೇರಿಯ: ಸಮಸ್ತ ಮೊಗೇರ ಹೊರೆಕಾಣಿಕೆ ಅಡೂರು ಪ್ರಾದೇಶಿಕ ಸಮಿತಿಯ ಸಮಾರೋಪ ಮತ್ತು ಅಭಿನಂದನಾ ಕಾರ್ಯಕ್ರಮವು ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಮಾಣಿ ಬಳಕ್ಕಿಲ ಇವರ ಮನೆಯಲ್ಲಿ ಜರಗಿತು. ಸಮಸ್ತ ಮೊಗೇರ ಹೊರೆ ಕಾಣಿಕೆ ಕೇಂದ್ರ ಸಮಿತಿಯ ಪ್ರತಿನಿಧಿ ಕೆ.ಕೆ. ಸ್ವಾಮಿಕೃಪಾ ಉಪಸ್ಥಿತರಿದ್ದು ಉದ್ಘಾಟಿಸಿ ಅಡೂರು ಪ್ರಾದೇಶಿಕ ಸಮಿತಿಯ ಕಾರ್ಯ ವೈಖರಿ ಅಚ್ಚುಕಟ್ಟು ಮತ್ತು ಸಮವಸ್ತ್ರ ಧರಿಸಿ ಒಗ್ಗಟ್ಟಿನಿಂದ ಮಧೂರು ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು. ಗೌರವಾಧ್ಯಕ್ಷ ಐತಪ್ಪ ಬಲಕ್ಕಿಲ ಮಾತನಾಡಿ ಮೊಗೇರ ಸಮುದಾಯದವರಾದ ನಾವು ನಾಗಬ್ರಹ್ಮ ದೇವರ ಆಶೀರ್ವಾದದೊಂದಿಗೆ ಗುರು ಹಿರಿಯರ ನುಡಿಯನ್ನು ಅನುಸರಿಸಿ ಒಗ್ಗಟ್ಟಿ ನಿಂದ ಭಾಗವಹಿಸಿದ್ದು ಸಂತೋಷದ ವಿಚಾರ ಎಂದರು. ಸಭೆಯಲ್ಲಿ 5000 ಮೇಲ್ಪಟ್ಟು ಧನ ಸಹಾಯವಿತ್ತ ಉದಾರ ದಾನಿಗಳನ್ನು ಮತ್ತು ಸಿಂಗಾರಿ ಮೇಳ, ಕುಣಿತ ಭಜನಾ ತಂಡಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಕೋಶಾಧಿಕಾರಿ ಕೃಷ್ಣ ಸಿ ಬಿ ಲೆಕ್ಕ ಪತ್ರ ಮಂಡಿಸಿದರು. ಪ್ರಾದೇಶಿಕ ಸಮಿತಿಯ ಉಪ ಸಮಿತಿಯ ಪದಾದಿಕಾರಿಗಳು ಶುಭಾಶಂಸನೆಗೈದರು. ಕಾರ್ಯದರ್ಶಿ ಚಂದ್ರ ಸಿ ಬಿ ಸ್ವಾಗತಿಸಿ ಸಹಕಾರ್ಯದರ್ಶಿ ಚಿತ್ರಾವತಿ ವಂದಿಸಿದರು.




.jpg)
