ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತಿ ಉತ್ಸವ ಮೇ 3ರಂದು ಬೆಳಗ್ಗೆ 9ರಿಂದ ಕಾಸರಗೋಡು ಸೀತಾಂಗೊಳಿಯ ಅಲಯನ್ಸ್ ಸಭಾಭವನದಲ್ಲಿ ಜರಗಲಿದ್ದು 'ವಿಜಯವಾಣಿ' ವರದಿಗಾರ ಮೊಹಮ್ಮದ್ ಅನ್ಸಾರ್ ಇನ್ನೋಳಿ ಸೇರಿದಂತೆ ಒಟ್ಟು 21ಮಂದಿಗೆ ದತ್ತಿ ನಿಧಿ ಪ್ರಶಸ್ತಿ ಘೋಷಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಎಂಬಿವುಗಳ ಸಂಯುಕ್ತ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಕಾರ್ಯನಿರತ ಪತ್ರಕರ್ತರ ಸಂಘದ ದ.ಕ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಂಗಳೂರು ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಗೆ ಪತ್ರಕರ್ತ ರವಿಬೆಳಗೆರೆ ಸ್ಮರಣಾರ್ಥ ದತ್ತಿ ನಿಧಿ ಪ್ರಶಸ್ತಿ, ಮೊಹಮ್ಮದ್ ಅನ್ಸಾರ್ ಇನ್ನೋಳಿ ಅವರಿಗೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಳಿದಂತೆ ಶ್ರೀನಿವಾಸ ಜೋಕಟ್ಟೆ ಮುಂಬೈ(ಬ್ರಹ್ಮೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ದತ್ತಿ ನಿಧಿ ಪ್ರಶಸ್ತಿ), ಮಲ್ಲಿಕಾರ್ಜುನ ರೆಡ್ಡಿ ಗೋಂದಿ ಬೆಳಗಾವಿ(ಡಾ. ಸಿ.ಸೋಮಶೇಖರ್ ನೀಡುವ ದತ್ತಿ ನಿಧಿ), ಎನ್. ರವಿಕುಮಾರ್ ಶಿವಮೊಗ್ಗ(ಹವ್ವಾ ಹಸನ್ ಫೌಂಡೇಶನ್ ಕುದ್ಕುಳಿ), ನಾಗರಾಜ ವೈ. ಕೊಪ್ಪಳ(ಅನಿವಾಸಿ ಉದ್ಯಮಿ ಜೋಸೆಫ್ ಮಾಥಿಯಾಸ್ ದುಬೈ ನೀಡುವ ದತ್ತಿ ನಿಧಿ), ಈಶ್ವರ್ ಅಲೆವೂರ್ ಮುಂಬೈ(ಕೆವಿಆರ್ ಟ್ಯಾಗೋರ್ ಸ್ಮರಣಾರ್ಥ ದತ್ತಿನಿಧಿ), ಸಿ.ಜಿ ಪುನೀತ್ ಮೈಸೂರು(ಆರ್ಥಿಕ ತಜ್ಞ ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ನೀಡುವ ದತ್ತಿ ನಿಧಿ), ವೇಣು ವಿನೋದ್ ಮಂಗಳೂರು(ಸೋಮಣ್ಣ ಬೇವಿನಮರದ ನೀಡುವ ದತ್ತಿನಿಧಿ), ಮೌಲಾನಾ ಸಾಬ್ ಬೀದರ್(ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ನೀಡುವ ದತ್ತಿ ನಿಧಿ), ಸ್ಟೀವನ್ ರೇಗೋ ಮಂಗಳೂರು(ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಭಟ್ ನೀಡುವ ದತ್ತಿನಿಧಿ), ಕೆ.ಜಿ ನಾಗಲಕ್ಷ್ಮೀ ಬಾಯಿ(ಉದ್ಯಮಿ ಶಿವಶಂಕರ್ ನೆಕ್ರಾಜೆ ನೀಡುವ ದತ್ತಿನಿಧಿ), ಸತ್ಯವತೀ ಮಂಗಳೂರು(ನ್ಯಾ. ಮಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ವಕೀಲ ಇಬ್ರಾಹಿಂ ಖಲೀಲ್ ಅರಿಮಲೆ ನೀಡುವ ದತ್ತಿನಿಧಿ), ಇಕ್ಬಾಲ್ ಕುತ್ತಾರ್ ಮಂಗಳೂರು(ಉದ್ಯಮಿ ಜೇಮ್ಸ್ ಮಂಡೋನ್ಸಾ ನೀಡುವ ದತ್ತಿನಿಧಿ), ಕಂಡಕೆರೆ ಇಸ್ಮಾಯಿಲ್ ಕೊಡಗು(ಮೊಗರೋಡಿ ಗೋಪಾಲಕೃಷ್ಣ ಮೆಲಾಂಟ ಸ್ಮರಣಾರ್ಥ ಹರ್ಷ ಮೆಲಾಂಟ ನಿಡುವ ದತ್ತಿನಿಧಿ), ರಾಮ ಅಜೆಕ್ಕಾರ್ ಉಡುಪಿ(ಉದ್ಯಮಿ ಅಶ್ರಫ್ ಮಾಂತೂರು ನೀಡುವ ದತ್ತಿನಿಧಿ), ಮತ್ತಿಕೆರೆ ಜಯರಾಂ ಮಂಡ್ಯ(ಉದ್ಯಮಿ ಕೆ.ಕೆ ಶೆಟ್ಟಿ ಕುತ್ತಿಕ್ಕಾರು ನಿಡುವ ದತ್ತಿನಿಧಿ) ಹಾಗೂ ಗಣೇಶ್ ಕೆ. ಸೂರ್ಲು, ಕಾಸರಗೋಡು, ಭಾಸ್ಕರ ಕೆ. ಕಾಸರಗೋಡು, ಅಜಿತ್ ಸ್ವರ್ಗ-ಪೆರ್ಲ ಅವರಿಗೆ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ ನೀಡಲಾಗುವುದು.




