ಉಪ್ಪಳ: ಬಾಯಾರು ಶ್ರೀಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ಇದರ ಜಾತ್ರೋತ್ಸವ ಇಂದಿನಿಂದ 29ರ ವರೆಗೆ ನಡೆಯಲಿದೆ.
ಇಂದು ರಾತ್ರಿ ಭಂಡಾರ ಇಳಿದು ಧ್ವಜಾರೋಹಣ ನಡೆಯಲಿದೆ. ನಾಳೆ ಕೊಟ್ಯದಾಯನ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂಜೆ 6 ರಿಂದ ನೃತ್ಯ ವೈವಿಧ್ಯ ನಡೆಯಲಿದೆ. 27 ರಂದು ಅಪರಾಹ್ನ 4ಕ್ಕೆ ಅಯ್ಯರ ಬಂಟರ ನೇಮ, ಪ್ರಥಮ ಬಂಡಿ ಉತ್ಸವ ನಡೆಯಲಿದೆ. ರಾತ್ರಿ 7 ರಿಂದ ಶ್ರೀಪಂಚಲಿಂಗೇಶ್ವರ ಕಲಾವೃಂದದ ಮಕ್ಕಳ ತಂಡದಿಂದ ಯಕ್ಷಗಾನ ಬಯಲಾಟ ನಡೆಯಲಿದೆ. 28 ರಂದು ಅಪರಾಹ್ನ 3 ರಿಂದ ಶ್ರೀಮಲರಾಯ ದೈವದ ನೇಮ, ನಡುಬಂಡಿ ಉತ್ಸವ ನಡೆಯಲಿದೆ. ಸಂಜೆ 5.30 ರಿಂದ ಧಾರ್ಮಿಕ ಸಭೆ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ರಾಮ ಬಿ.ಅಂಗಡಿಮಾರು ಅಧ್ಯಕ್ಷತೆ ವಹಿಸುವರು. ಶ್ರೀಕೃಷ್ಣ ಶಿವಕೃಪಾ ಮುಖ್ಯ ಅಥಿತಿಗಳಾಗಿರುವರು. ಲತೇಶ್ ಬಾಕ್ರಬೈಲು ಧಾರ್ಮಿಕ ಉಪನ್ಯಾಸ ನೀಡುವರು. ದೇವಿ ಪ್ರಸಾದ್ ಆಳ್ವ ಪೆರ್ವೊಡಿ ಬೀಡು ಅವರನ್ನು ಸನ್ಮಾನಿಸಲಾಗುವುದು. ಪ್ರಣಮ್, ಪ್ರಜ್ವಲ್, ದೀಪಕ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8.30 ರಿಂದ ಸ್ಟಾರ್ ನೈಟ್ ನಡೆಯಲಿದೆ.
ಮೇ.29 ರಂದು ಅಪರಾಹ್ನ 3 ರಿಂದ ಶ್ರೀಪಿಲಿಚಾಮುಂಡಿ ದೈವ ನೇಮ, ಕಡೇ ಬಂಡಿ ಉತ್ಸವ ನಡೆಯಲಿದೆ. ಸಂಜೆ 6 ರಿಂದ ಗಾನ ವೈಭವ, ರಾತ್ರಿ 9 ರಿಂದ ಬೆನಕ ಆಟ್ರ್ಸ್ ಕುಡ್ಲ ತಂಡದವರಿಂದ ಜಲದುರ್ಗೆ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಮೇ.1 ರಂದು ಸಂಜೆ 5.30 ರಿಂದ ಬಂಡಿಮಾರು ಕೊರತಿ, ಗುಳಿಗ ನೇಮ ನಡೆಯಲಿದೆ.




