ಪೆರ್ಲ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಕವಿತಾ ಕೌತುಕ ಸರಣಿ-3 ಕವಿ ಕಾವ್ಯ ಸಂವಾದ ಇಂದು ಅಪರಾಹ್ನ 2.20 ರಿಂದ ಪೆರ್ಲದ ವ್ಯಾಪಾರಿ ಭವನದಲ್ಲಿ ಆಯೋಜಿಸಲಾಗಿದೆ.
ನಿವೃತ್ತ ಶಿಕ್ಷಕ ಉಮೇಶ್ ಕೆ.ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಉದ್ಘಾಟಿಸುವರು. ಸುಭಾಷ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡುವರು. ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಲೇಖಕ ಬಿ.ಎಸ್.ಕಾಟುಕುಕ್ಕೆ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿರುವರು. ಕವಿಗಳಾದ ಎಸ್.ಎನ್.ಭಟ್ ಸೈಪಂಗಲ್ಲು, ವೆಂಕಟ್ ಭಟ್ ಎಡನೀರು, ಸುಂದರ ಬಾರಡ್ಕ, ದೀಕ್ಷಾ ಕೆಜಕ್ಕಾರು, ಹರೀಶ್ ಪೆರ್ಲ, ನಳಿನಿ ಸೈಪಂಗಲ್ಲು, ಗ್ರೀಷ್ಮ ಬಳ್ಳ, ನಿರ್ಮಲ ಸೇಸಪ್ಪ ಖಂಡಿಗೆ, ಆನಂದ ರೈ ಅಡ್ಕಸ್ಥಳ, ವಿಜಯ ಕಾನ, ದೀಕ್ಷಾ ಎಸ್.ಪಿ., ಹರ್ಷಿತಾ ಪಿ., ಪ್ರೇಮಾ ಶೆಟ್ಟಿ, ರಿಷಾ ಪೆರ್ಲ ಭಾಗವಹಿಸುವರು. ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಆಯಿಷಾ ಎ.ಎ.ಪೆರ್ಲ, ವಿಶಾಲಾಕ್ಷ ಪುತ್ರಕಳ, ಮಂಜುಶ್ರೀ ನಲ್ಕ ಮೊದಲಾದವರು ಉಪಸ್ಥಿತರಿರುವರು.





