ಕುಂಬಳೆ: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ನರಮೇಧಕ್ಕೆದುರಾಗಿ ಬಿಜೆಪಿ ಪುತ್ತಿಗೆ ಪಂಚಾಯತಿ ಸಮಿತಿ ವತಿಯಿಂದ ಪ್ರತಿಭಟನಾ ಕಾರ್ಯಕ್ರಮ ಸೀತಾಂಗೋಳಿ ಪೇಟೆಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಮಡಿದ ದೇಶವಾಸಿಗಳಿಗೆ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಧಾರ್ಮಿಕ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಘೋಷಣೆಗೆ ಕೂಗಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಮುರಳಿಧರ ಯಾದವ್ ನಾಯ್ಕಾಪು, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಪಂಚಾಯತಿ ಸಮಿತಿ ಅಧ್ಯಕ್ಷ ಜನಾರ್ಧನ ಕಣ್ಣೂರು, ಕಾರ್ಯದರ್ಶಿ ಪುರುಷೋತ್ತಮ, ಬಿಎಂಎಸ್ ನೇತಾರ ಹರೀಶ ಸಿದ್ಧಿಬೈಲ್, ಹಿರಿಯರಾದ ಜಯಂತ ಪಾಟಾಳಿ, ಪದ್ಮನಾಭ ಬಾಡೂರು ಮತ್ತಿತರರು ಭಾಗವಹಿಸಿದ್ದರು




.jpg)
