ಪೆರ್ಲ: ರಾಷ್ಟ್ರವಿಜಯ ಯಜ್ಞ ಸಮಿತಿ ಪೆರ್ಲ ಇದರ ನೇತೃತ್ವದಲ್ಲಿ ಮೇ.5 ರಂದು ಸೋಮವಾರ ಪೆರ್ಲ ಇಡಿಯಡ್ಕ 'ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರ'ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು 82 ಸಂವತ್ಸರಗಳನ್ನು ಪೂರೈಸಿರುವ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ
ಮತ್ತೂರು ವೇದಮೂರ್ತಿ ಚೆನ್ನಕೇಶವ ದೀಕ್ಷಿತರ ನೇತೃತ್ವದಲ್ಲಿ ರಾಷ್ಟವಿಜಯ ಯಜ್ಞ ಹಾಗೂ ಸಜಂಗದ್ದೆ ವೇದಮೂರ್ತಿ ಶ್ರೀಧರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮವನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10.45 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಮತ್ತೂರು ವೇದಮೂರ್ತಿ ಚೆನ್ನಕೇಶವ ದೀಕ್ಷಿತರು ಹಾಗೂ ಆರ್.ಎಸ್.ಎಸ್. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುವರು. 11.45 ಕ್ಕೆ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ, ಭೋಜನ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





