HEALTH TIPS

ವಳಮಲೆ ಶ್ರೀ ಪದ್ಮನಾಭ ಶೆಟ್ಟಿ ನಿಧನ ಬಂಟ ಸಮಾಜಕ್ಕೆ ತುಂಬಲಾರದ ನಷ್ಟ ಪಿಜಿ ಚಂದ್ರಹಾಸ ರೈ

ಬದಿಯಡ್ಕ: ಕುಂಬಳೆ ವಲಯ ಬಂಟರ ಸಂಘದ ಅಧ್ಯಕ್ಷ ಸಾಮಾಜಿಕ ಧಾರ್ಮಿಕ ಮುಂದಾಳು ಪದ್ಮನಾಭ ಶೆಟ್ಟಿ ಒಳಮಲೆ ಇವರಿಗೆ ಶ್ರದ್ಧಾಂಜಲಿ ಸಭೆ ಕುಂಬಳೆ ವಲಯ ಬಂಟರ ಸಂಘದ ಬದಿಯಡ್ಕ ಕಚೇರಿಯಲ್ಲಿ ಜರಗಿತು.

ಕುಂಬಳೆ ಪೀರ್ಕಾ ಉಪಾಧ್ಯಕ್ಷ ಸಂತೋಷ್ ರೈ ಬಜದ ಗುತ್ತು  ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ಮಾತನಾಡಿ ಅವರ ಅಗಲುವಿಕೆ ಬಂಟ ಸಮಾಜಕ್ಕೆ ತುಂಬಲಾರದ ನಷ್ಟ. ಅವರೊಂದಿಗಿನ  ಒಡನಾಟವನ್ನು ಸ್ಮರಿಸುತ್ತಾ ಬಂಟ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಬೆಳ್ಳೂರು ಬಂಟರ ಮಾತೃ ಸಮಿತಿ ಅಧ್ಯಕ್ಷೆ ಡಾ. ವಿದ್ಯಾಮೋಹನ್ ದಾಸ್ ರೈ ಬಂಟರ ಸಂಘದ ಅವರ ಕಾರ್ಯಚಟುವಟಿಕೆ, ನೇರ ನಡೆ ನುಡಿ ವ್ಯಕ್ತಿತ್ವದ ಬಗ್ಗೆ  ಮಾತನಾಡಿದರು.


ಜಿಲ್ಲಾ ಕೋಶಾಧಿಕಾರಿ ಚಿದಾನಂದ ಆಳ್ವ, ಮಾತೃ ಸಂಘದ ಕಾಸರಗೋಡು ತಾಲೂಕು ಸಹ ಸಂಚಾಲಕ ಸುದೀರ್ ಕುಮಾರ್ ರೈ, ಫಿರ್ಕಾ ಸಂಘದ ಪ್ರದಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ನಾನ, ಪಂಚಾಯತಿ ಘಟಕದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ನಿರಂಜನ್ ರೈ ಪೆರಡಾಲ, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪ ಕಾಜೂರು, ಮನಮೋಹನ ರೈ ಪಿಂಡಗ, ಹರಿಪ್ರಸಾದ್ ರೈ ಮಾಯಿಲೆಂಗಿ, ಶರತ್ ಚಂದ್ರ ಶೆಟ್ಟಿ ಶೇಣಿ, ದಯಾನಂದ ರೈ ಕಳುವಾಜೆ, ಹರ್ಷಕುಮಾರ್ ರೈ ಬೆಳಿಂಜೆ ಮೊದಲಾದವರು ನುಡಿ ನಮನ ಸಲ್ಲಿಸಿದರು. ಹರೀಶ್ ಆಳ್ವ ಉಜಾರು, ಜಗನ್ನಾಥ ರೈ ಕೊರೆಕ್ಕಾನ, ಜಯರಾಜ್ ರೈ ಎಡಮೊಗೆರು,ಪದ್ಮಾವತಿ, ಎಡಮೊಗೆರು, ಶ್ಯಾಮಲ.ರೈ ಸಸಿಹಿತ್ಲು, ಜಯಲಕ್ಷ್ಮಿ ಕಳುವಾಜೆ, ದಯಾನಂದ ರೈ ಮೇಗಿನ ಕಡಾರು, ಸಂತೋಷ್ ರೈ, ಅನಂತ.ರೈ ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries