ಪೆರ್ಲ: ಪಡ್ರೆ ಗ್ರಾಮದ ಮಲೆತ್ತಡ್ಕ ಶ್ರೀಜಟಾಧಾರಿ ಮೂಲಸ್ಥಾನ ಕ್ಷೇತ್ರದಲ್ಲಿ ಶ್ರೀದೇವಿ ಗುಡಿಯ ಶಿಲಾನ್ಯಾಸ ಸಮಾರಂಭ ಏ.30 ರಂದು ಬುಧವಾರ ಬೆಳಿಗ್ಗೆ 8 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7ಕ್ಕೆ ಶ್ರೀದೈವಕ್ಕೆ ಸೀಯಾಳ ಸಮರ್ಪಣೆ, ಪ್ರಾರ್ಥನೆ, 7.30ಕ್ಕೆ ಶ್ರೀಮದೆಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ ನಡೆಯಲಿದೆ. ಬಳಿಕ 8ಕ್ಕೆ ವೃಷಭ ಲಗ್ನ ಮುಹೂರ್ತದಲ್ಲಿ ಶ್ರೀಗಳಿಂದ ಶ್ರೀದೇವಿ ಗುಡಿಗೆ ಶಿಲಾನ್ಯಾಸ ನೆರವೇರಿಸುವರು ಎಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

