ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ನಡೆಯುತ್ತಿರುವ ಬಾಲವೇದಿ-ವರ್ಣ ಕುಟೀರ ಶಿಬಿರದ ಅಂಗವಾಗಿ ಆದೂರು ಪೋಲೀಸ್ ಠಾಣೆಗೆ ಭಾನುವಾರ ಭೇಟಿ ನೀಡಲಾಯಿತು.
ಇ.ಜನಾರ್ದನನ್ ಉದ್ಘಾಟಿಸಿದರು. ಎ.ಎಸ್.ಐ. ಸತೀಶನ್ ಎಂ ಅವರು ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ದುರುಪಯೋಗದ ಕುರಿತು ತರಗತಿ ನಡೆಸಿದರು. ಎಸ್.ಐ. ಅಜ್ಮಲ್, ರಮ್ಯಾ ಎಂ.ಸಿ, ಕೆ.ಕೆ ಮೋಹನನ್, ರಂಜಿತ್.ಕೆ., ಕೆ ಉಮೇಶ್ ಕುಮಾರ್ ಮಾತನಾಡಿದರು. ಬಾಲವೇದಿಕೆಯ ಪದಾಧಿಕಾರಿ ವಿನಯ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಅಮಯಾ ಬಿ.ಸಿ. ಸ್ವಾಗತಿಸಿ, ಕೀರ್ತನ ವಂದಿಸಿದರು.




.jpg)
.jpg)
