HEALTH TIPS

ಕೆ-ಪೋನ್ ಸಂಪರ್ಕಗಳಲ್ಲಿ ತ್ರಿಶೂರ್ ಮುಂಚೂಣಿಯಲ್ಲಿ: 7,500 ಕ್ಕೂ ಹೆಚ್ಚು ಸಂಪರ್ಕಗಳು

ತ್ರಿಶೂರ್: ಮನೆಗಳು, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೇರಳದ ಸ್ವಂತ ಇಂಟರ್ನೆಟ್ ಸಂಪರ್ಕವಾದ ಕೆ-ಪೋನ್ ತ್ರಿಶೂರ್ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿದೆ. ಕೆ-ಪೋನ್ ಸಾಮಾನ್ಯ ಜನರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ಒದಗಿಸುವ ಮೂಲಕ ಜನರನ್ನು ಆಕರ್ಷಿಸುತ್ತಿದೆ.

ತ್ರಿಶೂರ್ ಜಿಲ್ಲೆಯಲ್ಲಿ ಕೆ-ಪೋನ್ ಯೋಜನೆಯ ಮೂಲಕ ಈಗಾಗಲೇ 7564 ಸಂಪರ್ಕಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 2649.57 ಕಿ.ಮೀ. ಕೇಬಲ್‍ಗಳನ್ನು ಅಳವಡಿಸಲಾಗಿದೆ. ಕೆಎಸ್‍ಇಬಿ ಪ್ರಸರಣ ಗೋಪುರಗಳ ಮೂಲಕ 346.15 ಕಿ.ಮೀ. ಎಡಿ.ಎಸ್.ಎಸ್. ಕೇಬಲ್‍ಗಳನ್ನು ಮತ್ತು ಕೆಎಸ್‍ಇಬಿ ಪೋಸ್ಟ್‍ಗಳ ಮೂಲಕ 2303.43 ಕಿ.ಮೀ.ಒ.ಪಿ.ಜಿ.ಡಬ್ಲ್ಯು ಕೇಬಲ್‍ಗಳನ್ನು ಬಳಸಿ ಕೇಬಲ್ ಅಳವಡಿಸಲಾಗಿದೆ.  ಜಿಲ್ಲೆಯಲ್ಲಿ ಕಲೆಕ್ಟರೇಟ್ ಸೇರಿದಂತೆ 2494 ಸರ್ಕಾರಿ ಕಚೇರಿಗಳು ಪ್ರಸ್ತುತ ಕೆ-ಪೋನ್ ನೆಟ್‍ವರ್ಕ್ ಅನ್ನು ಬಳಸುತ್ತಿವೆ.


ಜಿಲ್ಲೆಯಲ್ಲಿ ಒಟ್ಟು 1003 ಬಿಪಿಎಲ್ ಮನೆಗಳಿಗೆ ಈಗಾಗಲೇ ಕೆ-ಪೋನ್ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ 4067 ವಾಣಿಜ್ಯ ಸಂಪರ್ಕಗಳನ್ನು ಸಹ ಒದಗಿಸಲಾಗಿದೆ. ಸ್ಥಳೀಯ ನಿರ್ವಾಹಕರ ಮೂಲಕ ವಾಣಿಜ್ಯ ಸಂಪರ್ಕಗಳನ್ನು ಒದಗಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ 287 ಸ್ಥಳೀಯ ನೆಟ್‍ವರ್ಕ್ ಆಪರೇಟರ್‍ಗಳು ಕೆ-ಪೋನ್‍ನೊಂದಿಗೆ ಸಹಕರಿಸುತ್ತಿದ್ದಾರೆ.

ಸಂಪರ್ಕಗಳಿಗಾಗಿ ಹೊಸ ನೋಂದಣಿಗಳು ಸಹ ಬರುತ್ತಿವೆ. ಜಿಲ್ಲೆಯಲ್ಲಿ ಎರಡು ಐಎಲ್.ಎಲ್ ಸಂಪರ್ಕಗಳು ಮತ್ತು 16 ಎಸ್‍ಎಂಇ ಸಂಪರ್ಕಗಳನ್ನು ಒದಗಿಸಲಾಗಿದೆ. ಹೊಸ ಮನೆ ಸಂಪರ್ಕವನ್ನು ಪಡೆಯಲು, ಮೈ ಕೆ-ಪೋನ್ ಮೊಬೈಲ್ ಅಪ್ಲಿಕೇಶನ್ ಅಥವಾ ಕೆ-ಪೋನ್ ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. 

ಟೋಲ್-ಫ್ರೀ ಸಂಖ್ಯೆ 18005704466 ಮೂಲಕವೂ ಸಂಪರ್ಕಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಕೆ-ಪೋನ್ ಯೋಜನೆಗಳು ಮತ್ತು ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಅಧಿಕೃತ ಕೆ-ಪೋನ್ ವೆಬ್‍ಸೈಟ್ hಣಣಠಿs://ಞಜಿoಟಿ.iಟಿ/ ಗೆ ಭೇಟಿ ನೀಡಿ ಅಥವಾ ಏಈಔಓ ಯೋಜನೆಗಳನ್ನು ಟೈಪ್ ಮಾಡುವ ಮೂಲಕ Whಚಿಣsಂಠಿಠಿ ಸಂಖ್ಯೆ 90616 04466 ಗೆ ಸಂದೇಶ ಕಳುಹಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries