ಪೆರ್ಲ: ರಾಷ್ಟ್ರವಿಜಯ ಯಜ್ಞ ಸಮಿತಿ ಪೆರ್ಲ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ ಅವರು 82 ಸಂವತ್ಸರ ಪೂರೈಸಿದ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಾರ್ಥ ಮತ್ತೂರು ವೇದಮೂರ್ತಿ ಚೆನ್ನಕೇಶವ ದೀಕ್ಷಿತ್ ಅವರ ನೇತೃತ್ವದಲ್ಲಿ 'ರಾಷ್ಟ್ರ ವಿಜಯ ಯಜ್ಞ' ಹಾಗೂ ಸಜಂಗದ್ದೆ ವೇದಮೂರ್ತಿ ಶ್ರೀಧರ ಭಟ್ಟ ಅವರ ನೇತೃತ್ವದಲ್ಲಿ ಪವಮಾನ ಹೋಮ ಮೇ 5ರಂದು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರುಗಲಿರುವುದು.
ಬೆಳಗ್ಗೆ 10.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡುವರು. ಮತ್ತೂರು ವೇದಮೂರ್ತಿ ಚೆನ್ನಕೇಶವ ದೀಕ್ಷಿತ್ ಹಾಗೂ ಆರೆಸ್ಸೆಸ್ ಅಖಿಲಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಅಭ್ಯಾಗತರಾಗಿ ಭಾಗವಹಿಸುವರು. ನಂತರ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ ನಡೆಯುವುದು.





