ಬೀಜಿಂಗ್: ಚೀನಾದಲ್ಲಿನ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಶುಕ್ರವಾರ ಚೀನಾದ ವಿದೇಶಾಂಗ ಸಚಿವ ಸನ್ ವೇಡಂಗ್ ಅವರನ್ನು ಭೇಟಿಯಾಗಿ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದ್ದಾರೆ. 'ಏಪ್ರಿಲ್ 9ರಂದು ಸಭೆ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರ, ಬಾಂಧವ್ಯ ಕುರಿತು ಚರ್ಚೆ ನಡೆಯಿತು' ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.ಉಭಯ ದೇಶಗಳ ನಡುವೆ ಆಗಿರುವ ಒಪ್ಪಂದದ ಅನುಷ್ಠಾನ, ಅಭಿವೃದ್ಧಿಗೆ ಉತ್ತೇಜನ ಮತ್ತು ಆರೋಗ್ಯಕರ ಪ್ರಗತಿಗೆ ಒತ್ತು ನೀಡುವ ಕುರಿತು ಚರ್ಚಿಸಲಾಯಿತು ಎಂದು ಸಚಿವಾಲಯವು ತಿಳಿಸಿದೆ.

