HEALTH TIPS

ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ರತನ್ ಮೋಹಿನಿ ದಾದಿ ಶಿವೈಖ್ಯ

ನಾಗ್ಪುರ: ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ರತನ್ ಮೋಹಿನಿ ದಾದಿಜಿ (101) ಶಿವೈಖ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದಾಗಿ ಅಸ್ವಸ್ಥರಾಗಿದ್ದವರು ಮೃತರಾದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಶೋಕ ಸಂದೇಶದಲ್ಲಿ, ದಾದಿ ರತನ್ ಮೋಹಿನಿ ಅವರ ನಿಧನದಿಂದ ತೀವ್ರ ದುಃಖಿತರಾಗಿರುವುದಾಗಿ ತಿಳಿಸಿದ್ದಾರೆ. ದಾದಿಜಿ ಬ್ರಹ್ಮಕುಮಾರಿ ಸಮಾಜದ ಮಾರ್ಗದರ್ಶಕ ಬೆಳಕು ಎಂದು ರಾಷ್ಟ್ರಪತಿಗಳು ಹೇಳಿರುವರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ, ದಾದಿ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ವರ್ಣರಂಜಿತ ಉಪಸ್ಥಿತಿಯಾಗಿದ್ದರು ಎಂದು ಹೇಳಿದ್ದಾರೆ.

ಆರ್‍ಎಸ್‍ಎಸ್ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ ಅವರು ದಾದಿಜಿಯವರನ್ನು ಸ್ಮರಿಸಿ ಸಂದೇಶದಲ್ಲಿ, ದಾದಿಜಿ ಅವರಿಗೆ ಗೌರವ ಸಲ್ಲಿಸುವುದಾಗಿ ಹೇಳಿದರು. ಮೋಹನ್ ಭಾಗವತ್ ಮತ್ತು ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರೂ ದುಃಖಸಂದೇಶ ನೀಡಿರುವರು. ಶ್ರೀ ವೈಕುಂಠಧಾಮಕ್ಕೆ ತೆರಳಿರುವ ದಾದಿಜಿಯವರ ನಿಧನವು ಅತ್ಯಂತ ದುಃಖಕರವಾಗಿದೆ. ದಾದಿಜಿ ತಮ್ಮ ಜೀವನದುದ್ದಕ್ಕೂ ಸಾವಿರಾರು ಯುವ ಸಹೋದರಿಯರಿಗೆ ತರಬೇತಿ ನೀಡುವ ಮಹತ್ವದ ಧ್ಯೇಯವನ್ನು ನಿರ್ವಹಿಸಿದ್ದರು. ಹಲವಾರು ಪಾದಯಾತ್ರೆಗಳ ಮೂಲಕ ಭಾರತೀಯ ಸಂಸ್ಕøತಿ ಮತ್ತು ಮೌಲ್ಯಗಳನ್ನು ಹರಡಲು ದಾದಿಜಿ ಅವರು ಮಾಡಿದ ಪ್ರಯತ್ನಗಳು ಯಾವಾಗಲೂ ಸ್ಮರಣೀಯ ಎಂದು ಸರಸಂಘಚಾಲಕ್ ಮತ್ತು ಸರಕಾರ್ಯವಾಹ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾರ್ಚ್ 25, 1925 ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್‍ನಲ್ಲಿ ಜನಿಸಿದ ದಾದಿ, ಹದಿಮೂರನೇ ವಯಸ್ಸಿನಲ್ಲಿ ಬ್ರಹ್ಮ ಕುಮಾರಿಯಾದರು. ದಾದಿಜಿಯವರು ತಮ್ಮ 88 ವರ್ಷಗಳ ಆಧ್ಯಾತ್ಮಿಕ ಪಯಣದಲ್ಲಿ ಬ್ರಹ್ಮ ಕುಮಾರೀಸ್ ಸಮಾಜದ ಆಧಾರಸ್ತಂಭವಾಗಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries