HEALTH TIPS

ಸಾಗರೋತ್ತರ ಕ್ಯಾಂಪಸ್‌: ಯುಎಇ ಜತೆ ಐಐಎಂಎ ಒಪ್ಪಂದ

ಅಹಮದಾಬಾದ್‌: ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂಎ) ತನ್ನ ಮೊದಲ ಸಾಗರೋತ್ತರ ಕ್ಯಾಂಪಸ್‌ ಸ್ಥಾಪನೆಗಾಗಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದೆ. 

ಬಹು ಸಂಸ್ಕೃತಿಯ ಶಿಕ್ಷಣ ಕೇಂದ್ರವೆಂದೇ ಖ್ಯಾತಿ ಹೊಂದಿರುವ ದುಬೈನ ಇಂಟರ್‌ನ್ಯಾಷನಲ್‌ ಅಕಾಡೆಮಿಕ್‌ ಸಿಟಿಯಲ್ಲಿ (ಡಿಐಎಸಿ) ಐಐಎಂನ ಕ್ಯಾಂಪಸ್‌ ತೆರೆಯಲಾಗುತ್ತದೆ.

ಜಾಗತಿಕ ವೃತ್ತಿಪರರಿಗೆ ಮತ್ತು ಉದ್ಯಮಿಗಳಿಗೆ ಕೌಶಲ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವಂತ, 1 ವರ್ಷದ ಅವಧಿಯ ಪೂರ್ಣಕಾಲಿಕ ಎಂಬಿಎ ರೀತಿಯ ಕೋರ್ಸ್‌ಗಳನ್ನು ಐಐಎಂಎ ವಿನ್ಯಾಸಗೊಳಿಸಿದೆ.

ಮೊದಲಿಗೆ ಡಿಐಎಸಿನಲ್ಲಿ ಈ ಕೋರ್ಸ್‌ಗಳನ್ನು ಪ್ರಾರಂಭಿಸಿ, ಬಳಿಕ ಶಾಶ್ವತವಾದ ಕ್ಯಾಂಪಸ್‌ ಸ್ಥಾಪಿಸಿ 2029ರ ವೇಳೆಗೆ ಪೂರ್ಣಪ್ರಮಾಣದ ಕಾರ್ಯಾಚರಣೆಯ ಖಾತರಿ ಪಡಿಸಿಕೊಳ್ಳುವುದಾಗಿಯೂ ಐಐಎಂಎ ಹೇಳಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ನೇತೃತ್ವದಲ್ಲಿ ಐಐಎಂಎ ನಿರ್ದೇಶಕ ಭರತ್‌ ಭಾಸ್ಕರ್‌ ಹಾಗೂ ದುಬೈನ ಯುವರಾಜ, ಉಪ ಪ್ರಧಾನಿ ಶೇಖ್‌ ಹಮ್ದಾನ್‌ ಬಿನ್‌ ಮೊಹಮ್ಮದ್‌ ಅಲ್‌ ಮಕ್ತೌಮ್‌ ನಡುವೆ ಕ್ಯಾಂಪಸ್‌ ಸ್ಥಾಪನೆಯ ಒಪ್ಪಂದ ಮಂಗಳವಾರ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries